ಜ.22ರಂದು ರಜೆ ಘೋಷಣೆಗೆ ಆಗ್ರಹ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು..?

ಬೆಂಗಳೂರು,ಜನವರಿ,20,2024(www.justkannada.in):  ರಾಮಮಂದಿರ ಉದ್ಘಾಟನೆಯ ದಿನ ಜನವರಿ 22 ರಂದು ರಾಜ್ಯದಲ್ಲೂ ರಜೆ ಘೋಷಿಸುವಂತೆ ಆಗ್ರಹ ಕೇಳಿ ಬಂದಿರುವ ಹಿನ್ನೆಲೆ ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ,  ರಜೆ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಮನವಿ ನನಗೆ ಗೊತ್ತಿಲ್ಲ. ಪತ್ರ ಬಂದರೆ ನೋಡ್ತೀನಿ ಎಂದಿದ್ದಾರೆ.

ಇನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಜನವರಿ 22 ರಂದು ಅಯೋಧ್ಯೆಗೆ ನಾನು ಹೋಗಲ್ಲ. ರಾಜಕೀಯ ಮಾಡುತ್ತಿರುವುದಕ್ಕೆ ನಾನು ಹೋಗಲ್ಲ ಬೇರೆ ದಿನ ಅಯೋಧ್ಯೆಗೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Demand -declaration – holiday -Jan 22-CM Siddaramaiah- response.