ನಟ ದರ್ಶನ್ ಗೆ ರಿಲೀಫ್: ಚಾರ್ಜ್ ಶೀಟ್ ನಲ್ಲಿ ಹೆಸರು ಕೈಬಿಟ್ಟ ಪೊಲೀಸರು.

ಬೆಂಗಳೂರು,ಜನವರಿ,20,2024(www.justkannada.in):  ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ರಿಲೀಫ್ ಸಿಕ್ಕಿದ್ದು  ಆರ್ ಆರ್ ನಗರ ಠಾಣಾ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಅವರ ಹೆಸರನ್ನ ಪೊಲೀಸರು ಕೈಬಿಟ್ಟಿದ್ದು  ಪ್ರಕರಣಕ್ಕೂ ನಟ ದರ್ಶನ್‌ ಅವರಿಗೂ ಸಂಬಂಧವಿಲ್ಲ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಅ.28ರಂದು ಆರ್‌ ಆರ್‌ ನಗರದ ನಟ ದರ್ಶನ್‌ ನಿವಾಸದ ಪಕ್ಕದ ಖಾಲಿ ಜಾಗದಲ್ಲಿ ಎರಡು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು ಎಂದು ಆರೋಪಿಸಿ ಬಿಇಎಂಲ್‌ 5ನೇ ಹಂತದ ನಿವಾಸಿ ಅಮಿತಾ ಜಿಂದಾಲ್‌ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.

ಈ ನಿಟ್ಟಿನಲ್ಲಿ ನಾಯಿಗಳ ಮಾಲೀಕರು ಎನ್ನಲಾದ ದರ್ಶನ್‌ ಅವರನ್ನು ಕೇಸ್‌ನ 2ನೇ ಆರೋಪಿಯನ್ನಾಗಿ ಪರಿಗಣಿಸಿ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಈ ನಡುವೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಗೆ ಆರ್ ಆರ್ ನಗರ ಠಾಣಾ ಪೊಲೀಸರು 150ಕ್ಕೂ ಹೆಚ್ಚು ಪುಟಗಳ  ಚಾರ್ಚ್‌ ಶೀಟ್‌ ಸಲ್ಲಿಸಿದ್ದಾರೆ.

ಈ ವೇಳೆ ಆರೋಪ ಪಟ್ಟಿಯಲ್ಲಿ ದರ್ಶನ್‌ ಅವರ ಹೆಸರನ್ನು  ಕೈಬಿಡಲಾಗಿದೆ ಎನ್ನಲಾಗಿದೆ. ಘಟನೆಗೂ, ನಟ ದರ್ಶನಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

Key words: actor –Darshan- name -dropped -charge sheet- Police