ಯುವ ದಸರೆಗೆ ಬರುತ್ತಿದ್ದಾರೆ ಸೋಶಿಯಲ್ ಮೀಡಿಯಾ ಸ್ಟಾರ್ ರಾನು ಮಂಡಲ್

0
192

ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ಸೋಶಿಯಲ್ ಮೀಡಿಯಾ ಸ್ಟಾರ್ ರಾನು ಮಂಡಲ್ ಯುವದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಿರಿಕಂಠದ ಮೂಲಕ ಮೋಡಿ ಮಾಡಲಿದ್ದಾರೆ.

ಅಕ್ಟೋಬರ್ 1 ರಿಂದ 6ರವರೆಗೆ ಯುವದಸರಾ ಕಾರ್ಯಕ್ರಮ ಆಯೋಜಿಸಿದ್ದು, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ.ಸಿಂಧು ಉದ್ಘಾಟಿಸಲಿದ್ದಾರೆ.

ಅದೇ ದಿನ ಗಾಯಕಿ ರಾನು ಮಂಡಲ್ ಕೂಡ ಆಗಮಿಸುತ್ತಿದ್ದು, ಯುವದಸರಾ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ದಸರಾ ಉಪಸಮಿತಿ ಯುವದಸರಾ ವೇದಿಕೆಯಲ್ಲಿ ರಾನುಮಂಡಲ್‌ರನ್ನು ಸನ್ಮಾನಿಸಲಾಗುತ್ತದೆ.

ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾನುಮಂಡಲ್‌ಗೆ ಅವಕಾಶ ನೀಡಲಾಗಿದೆ ಎಂದು ದಸರಾ ಉಪಸಮಿತಿ ತಿಳಿಸಿದೆ.