ನನಗೆ ಕಾನೂನಿನ ಮೇಲೆ ಗೌರವ, ದೇವರ ಮೇಲೆ ನಂಬಿಕೆ ಇದೆ- ಮಾಜಿ ಸಚಿವ ಎಚ್.ಡಿ ರೇವಣ್ಣ.

ಬೆಳ್ತಂಗಡಿ,ಮೇ,27,2024 (www.justkannada.in): ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ, ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್  ಸಂಬಂಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಧರ್ಮಸ್ಥಳಕ್ಕೆ ತೆರಳಿ ಶ್ರೀಮಂಜುನಾಥನ ದರ್ಶನ ಪಡೆದ ಹೆ್ಚ್.ಡಿ ರೇವಣ್ಣ ಸ್ವಲ್ಪಸಮಯದವರೆಗ ಧ್ಯಾನ ಮಾಡಿದ್ದಾರೆ. ಮಂಜುನಾಥಸ್ವಾಮಿ ದರ್ಶನ ಬಳಿಕ ಮಾತನಾಡಿದ ಹೆಚ್.ಡಿ ರೇವಣ್ಣ,   ನನಗೆ ಕಾನೂನಿನ ಮೇಲೆ ಗೌರವ, ದೇವರ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ಪ್ರಕರಣ ನ್ಯಾಯಾಲಯದಲ್ಲಿದೆ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ ಮಂಜುನಾಥಸ್ವಾಮಿಯ ಮೇಲೆ ನಂಬಿಕೆ ಇದೆ. ರಾಜ್ಯದ ಜನತೆ ಮೇಲೆ ನನಗೆ ನಂಬಿಕೆ ಇದೆ ಹಾಸನ ಚಲೋ ಬಗ್ಗೆ ನನಗೆ ಗೊತ್ತಿಲ್ಲ ಯಾವುದರ ಬಗ್ಗೆಯೋ ಪ್ರತಿಕ್ರಿಯಿಸಿಲ್ಲ ಎಂದು ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.

Key words:  Former minister, HD Revanna, Visit, Dharmasthala