ಪೊಲೀಸ್ ಠಾಣೆ ಮೇಲೆ ದಾಳಿ, ಕಲ್ಲೆಸೆತ ಕೇಸ್: ಸರ್ಕಾರದ ವಿರುದ್ದ ಸುರೇಶ್ ಕುಮಾರ್ ಕಿಡಿ.

ಬೆಂಗಳೂರು,ಮೇ,27,2024 (www.justkannada.in):  ದಾವಣಗೆರೆಯ ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ  ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದ ಘಟನೆ ಬಗ್ಗೆ  ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರ  ಮೇಲೆ ಹಲ್ಲೆ ನಡೆಸುವ ಸ್ಥಿತಿ  ಇದೆ. ರಕ್ಷಣೆ ಕೊಡುವವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ವೋಟಗಾಗಿ ರಾಜಕೀಯ ಮಾಡಬಾರದು. ಕಾನೂನು ಸುವ್ಯವಸ್ಥೇ ಕಾಪಾಡುವುದು ಮುಖ್ಯ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆದಿಲ್ ಎಂಬ ಆರೋಪಿಯನ್ನ ಚೆನ್ನಗಿರಿ ಠಾಣಾ ಪೊಲೀಸರು ಬಂಧಿಸಿ ಕರೆತಂದಿದ್ದರು. ಈ ವೇಳೆ ಆರೋಪಿ ಆದಿಲ್ ಸಾವನ್ನಪ್ಪಿದ್ದನು. ಇದರಿಂದ ರೊಚ್ಚಿಗೆದ್ದ ಜನ  ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿ ಪೊಲೀಸ್ ವಾಹನಗಳನ್ನ ಜಖಂಗೊಳಿಸಿದ್ದರು.

Key words: Attack, police, station, Suresh Kumar, Govt