ಭಾಷೆ ಮತ್ತು ಕನ್ನಡ ಪರಂಪರೆ ಸಂರಕ್ಷಣೆಯಲ್ಲಿ ವಿಶ್ವವಿದ್ಯಾನಿಲಯದ ಕ್ರಮಗಳು

Karnataka state open university Kannada department

 

ಮೈಸೂರು, ಜೂ.13,2024:  ಕನ್ನಡ ಭಾಷೆ ಮತ್ತು ಕನ್ನಡ ಪರಂಪರೆ 2000 ವರ್ಷಗಳ ಸುಧೀರ್ಘ ಪರಂಪರೆಯುಳ್ಳದ್ದಾಗಿದೆ. ಕನ್ನಡ ಭಾಷೆಯನ್ನು ಸುಮಾರು ಕ್ರಿಶ. 450ರ ಹಲ್ಮಿಡಿ ಶಾಸನದ ಕಾಲದಿಂದಲೂ ಆಡಳಿತ ಭಾಷೆಯಾಗಿ ಬಳಸಿದ ಉದಾಹರಣೆ ಕರ್ನಾಟಕದಲ್ಲಿ ದೊರೆಯುತ್ತವೆ.

ಕನ್ನಡ ನಾಡನ್ನು ಕ್ರಿಶ.5ನೆಯ ಶತಮಾನದಿ೦ದ 18ನೇ ಶತಮಾನದವರೆಗೆ ಆಳಿದ ರಾಜಮನೆತನಗಳಲ್ಲಿ ಮಹತ್ವದವರೆಂದರೆ ಬನವಾಸಿಯ ಕದ೦ಬರು, ಗ೦ಗರು, ಬಾದಾಮಿ ಚಾಲುಕ್ಕರು, ರಾಷ್ಟ್ರಕೂಟರು. ವಿಜಯನಗರದ ಅರಸರು, ಬಹುಮನಿ ಸುಲ್ತಾನರು, ಮೈಸೂರು ಅರಸರು ಮೊದಲಾದವರು.

ಈ ರಾಜವಂಶಗಳು ಕನ್ನಡವನ್ನೇ ಆಡಳಿತದಲ್ಲಿ ಬಳಸುತ್ತಿದ್ದರೆನ್ನುವುದು ಆಯಾ ಕಾಲದ ಶಾಸನಗಳಿ೦ದ. ಇತರ ದಾಖಲೆಗಳಿಂದ ವೇದ್ಯವಾಗುತ್ತದೆ. ಹೀಗೆ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಬೆಳದುಬ೦ದ ಇತಿಹಾಸವಿದೆ. 1956 ನವೆಂಬರ್ 1ರಂದು ಕರ್ನಾಟಕ ರಾಜ್ಯದ ಉದಯವಾಯಿತು.

ಆಡಳಿತ ಭಾಷೆ ಕನ್ನಡವನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಪ್ರಯತ್ನಗಳು

(1) 1963ರಲ್ಲಿ ಕನ್ನಡವೇ ಕರ್ನಾಟಕದ ಆಡಳಿತ ಭಾಷೆಯೆಂದು “ಅಧಿಕೃತ ಭಾಷಾ ಕಾಯಿದೆ” The Karnataka official Language Act  1963 (Karnataka act no of 1963 ) ರ ಮೂಲಕ ಸಾರಲಾಯಿತು. ಇದನ್ನು 1963ರ ಅಕ್ಟೋಬರ್ 10ನೇ ದಿನಾ೦ಕದಂದು ಕರ್ನಾಟಕ ರಾಜ್ಯಪತ್ರದಲ್ಲಿ ಮೊದಲು ಪ್ರಕಟಿಸಲಾಯಿತು.

(2) “ಕರ್ನಾಟಕ ರಾಜ್ಯ ಭಾಷಾ ಅದಿನಿಯಮ” 1963ರ ನಾಲ್ಕನೆಯ ಅಧಿಕರಣದ ಮೇರೆಗೆ

ಮಾರ್ಚ್ 1968ರಲ್ಲಿ ತಾಲ್ಲೂಕು ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯೆಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಯಿತು.

(3) 1-11-1979 ರಿಂದ  1-11-1980ರ ವರೆಗೆ ಕನ್ನಡ ಆಡಳಿತ ಭಾಷಾ ವರ್ಷವನ್ನು ಆಚರಿಸಲಾಯಿತು. ಈ ಆಚರಣೆಯ ಅಂಗವಾಗಿ ಆಯ್ಕೆ ಮಾಡಲ್ಪಟ್ಟ ಜಿಲ್ಲೆಗಳಲ್ಲಿ ರೆವೆನ್ಯೂ ಮಟ್ಟದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲಾಯಿತು.

(4)1980ರಲ್ಲಿ ರಾಜ್ಯಾದ್ಯಾಂತ ಕನ್ನಡವೇ ಅಧಿಕೃತ ಭಾಷೆಯೆಂದು ಆದೇಶ ನೀಡಲಾಯಿತು. ಕಚೇರಿಯ ಕೈಪಿಡಿಗಳನ್ನು ಮತ್ತು ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಆದೇಶ ನೀಡಲಾಯಿತು.

(5) ಇಲಾಖಾ ನೇಮಾಕಾತಿ ಸಮಿತಿಗಳು ಹಾಗೂ ಲೋಕಾಸೇವಾ ಆಯೋಗ ಕರೆಯುವ ಹುದ್ದೆಗಳ ಸಂಬ೦ಧ ಅರ್ಜಿ ನಮೂನೆಗಳು ಕನ್ನಡದಲ್ಲಿ ಮುದ್ರಣಗೊಳ್ಳಬೇಕೆಂದು 1982ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಆಡಳಿತದಲ್ಲಿ ಕನ್ನಡವನ್ನು ಭಾಷೆಯಾಗಿ ಪ್ರಯೋಗದಲ್ಲಿ ತರುವಲ್ಲಿ ಕಂಡುಬರಬಹುದಾದ ನ್ಯೂನತೆಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವ ಸಮಿತಿಯನ್ನು ರಚಿಸುವ ಬಗ್ಗೆ ಆದೇಶವನ್ನು ಹೊರಡಿಸಲಾಯಿತು. 1982ರಲ್ಲಿ “ಕನ್ನಡ ಆಡಳಿತ ಭಾಷಾ ಕಾವಲು ಸಮಿತಿ”ಯನ್ನು ರಚಿಸಲಾಯಿತು.

(6)1984-85 ರಲ್ಲಿ ಕನ್ನಡ ಭಾಷೆಯ ಹೊಸ ಬೆರಳಚ್ಚು ಯಂತ್ರಗಳನ್ನು ಒದಗಿಸುವುದು ಮತ್ತು ಕನ್ನಡ ಬಳಕೆಯಲ್ಲಿ ಆಗುವ ಅಡೆತಡೆಗಳಿಗೆ ಇಲಾಖೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿ ಮಾಡುವ ಆದೇಶ ಹೊರಡಿಸಲಾಯಿತು. 1985ನೇ ನವೆಂಬರ್ 1ನೇ ದಿನಾಂಖದಿಂದ ಒಂದು ವರ್ಷಕಾಲ “ಸಮಗ್ರ ಕನ್ನಡ ಆಡಳಿತ ಭಾಷಾ ವರ್ಷ” ಎಂದು ಆಚರಿಸಲು ಮತ್ತು ಕಛೇರಿಗಳಲ್ಲಿ ಕನ್ನಡ ಬಳಕೆಯ ಪ್ರಮಾಣ ಶೇಕಡ 10೦ಕ್ಕೆ 100 ಇರಬೇಕೆಂದು ಕ್ರಮಕೈಗೊಳ್ಳಲಾಯಿತು.

(7) ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ ಇತ್ತೀಚೆಗೆ 1915ರಲ್ಲಿ “ಕನ್ನಡ ಭಾಷಾ ಕಲಿಕೆ ಕಾಯಿದೆ- 2015 ಮತ್ತು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ-2022”ಗಳನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದು ಅವು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಾದುಕುಳಿತಿವೆ.

  • ಆಡಳಿತ ಭಾಷೆ ಕನ್ನಡವನ್ನು ಜಾರಿಗೊಳಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಯತ್ನಗಳು

ಮೈಸೂರು ವಿಶ್ವವಿದ್ಯಾನಿಲಯ 1969 ರಲ್ಲಿ “ಅ೦ಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ” ಎಂದು ಪ್ರಾರಂಭಿಸಿತು. ಈ ಸಂಸ್ಥೆಯನ್ನು 1996ರಲ್ಲಿ ಕರ್ನಾಟಕ ಸರ್ಕಾರ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” ಎಂದು ಮರು ನಾಮಕರಣ ಗೊಳಿಸಿ “ಮುಕ್ತ ವಿಶ್ವವಿದ್ಯಾನಿಲಯದ ಕಾಯಿದೆ”ಯನ್ನು ಹೊರಡಿಸಿತು. 1996ರಲ್ಲಿ ನಾಮಕರಣಗೊ೦ಡ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” ಸ್ಥಾಪನೆಗೊಂಡ ಕಾಲಮಾನದಿ೦ದಲೂ ಇಂದಿನವರೆಗೂ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ವಿಶ್ವವಿದ್ಯಾನಿಲಯದ ಆಡಳಿತ ಭಾಷೆಯಾಗಿ ಬಳಸುತ್ತಾ ಬಂದಿದೆ.

ಸರ್ಕಾರದ ನಿರ್ದೇಶನದ ಅನುಸಾರ ಕಾಲದಿಂದ ಕಾಲಕ್ಕೆ ಆಡಳಿತ ಭಾಷೆ ಸಂಪೂರ್ಣವಾಗಿ ಕನ್ನಡದಲ್ಲಿಯೇ ಇರಬೇಕು ಎಂದು ಸುತ್ತೋಲೆಗಳನ್ನು ಹೊರಡಿಸಿದೆ.

“ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” ನಡೆಸಿರುವ ಕನ್ನಡಪರ ಕಾರ್ಯಗಳು:

ಇದರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಸ್ಥಾಪಿತವಾದ “ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ” ಯ ಅಡಿಯಲ್ಲಿ “ಕನ್ನಡ ವಿಭಾಗ’ವೆ೦ದು ಕಾರ್ಯ ನಿರ್ವಹಿಸುತ್ತಿದ್ದ ಕನ್ನಡ ವಿಭಾಗ“ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” ಸ್ಥಾಪನೆಗೊಂಡ ನಂತರ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” ಎಂದು ಮರು ನಾಮಕರಣಗೊಂಡು ಕಾರ್ಯನಿರ್ವಹಿಸುತ್ತದೆ.

(1) 1996ರಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ”ವು “ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ” ನವದೆಹಲಿ ಇವರೊಂದಿಗೆ ಸೇರಿ ನವೆಂಬರ್-14,15,16 ಮೂರು ದಿನಗಳು “ದೂರ ಶಿಕ್ಷಣ: ಸ್ವಯಂ ಕಲಿಕಾ ಸಾಮಗ್ರಿಗಳು” ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ಪಠ್ಯಕ್ರಮಗಳ ತಯಾರಿಕೆಯ ತರಬೇತಿಯನ್ನು ಪಡೆದರು.

(2) “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ”ವು “ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ” ನವದೆಹಲಿ ಇವರೊಂದಿಗೆ ಸೇರಿ 2002, ಫೆಬ್ರವರಿ-4 ರಂದು ಒಂದು ದಿನದ ಕಾರ್ಯಕ್ರಮ “ರೇಡಿಯೋ ಸಂವಾದದ ಸಾಮಗಿಗಳ ತಯಾರಿಕೆ ಮತ್ತು ಪೋನ್ ಸಂವಾದ” ತರಬೇತಿ ಕಾರ್ಯಾಕ್ರಮದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ರೇಡಿಯೋ ಸ್ಕಿಪ್ಟ್ ಪಠ್ಯಕ್ರಮಗಳ ತಯಾರಿಕೆಯ ತರಬೇತಿಯನ್ನು ಪಡೆದರು.

(3) “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ”ವು 2002ರ ಮಾರ್ಚ್ -15.16.17 ಮೂರು ದಿನಗಳ ಕಾರ್ಯಾಗಾರದಲ್ಲಿ “ದೂರ ಶಿಕ್ಷಣ: ಸ್ವಯಂ ಕಲಿಕಾ ಸಾಮಗಿಗಳು” ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ಪಠ್ಯಕ್ರಮಗಳ ತಯಾರಿಕೆಯ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

(4) 2003ರಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” “ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ”ದೊಂದಿಗೆ ಸೇರಿ 6 ದಿನಗಳು ಜನವರಿ 7 ರಿಂದ 12ರವರೆಗೆ “ಆಡಿಯೋ ಮತ್ತು ವಿಡಿಯೋ ಪ್ರೊಡಕ್ಷನ್” ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ಪಠ್ಯಕ್ರಮಗಳ ದೃಶ್ಯಸರಣಿ ಮಾಡಿ ಭಾಗವಹಿಸಿದ್ದರು.

(5) “ಮುಕ್ತ ದೂರ ಶಿಕ್ಷಣದಲ್ಲಿ ಗುಣಮಟ್ಟದ ಭರವಸೆ” ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿ 2007-ಮಾರ್ಚ್-3 ರಿಂದ 7 ನೇ ತಾರೀಖಿನವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದಶವಾರ್ಷಿಕ ಸ೦ಭ್ರಮ ಆಚರಣೆ ನಡೆಸಿತು.

(6) “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ”, ಕರಾಮುವಿ 2008-ನವೆಂಬರ್-24, 25 ಮತ್ತು 26 ಮೂರು ದಿನಗಳು “ಕನ್ನಡ ಎಂ.ಎ. ಸಿಮ್ ಪಾಠಗಳ ಪರಿಷ್ಕರಣ ಕಾರ್ಯಾಗಾರ”  ನಡೆಸಿತು.

(7) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2008-ನವೆ೦ಬರ್-24, 25 ಮತ್ತು 26 ಮೂರು ದಿನಗಳು “ಪ್ರಥಮ ಮತ್ತು ಅಂತಿಮ ಕನ್ನಡ ಎಂ.ಎ. ಸಿಮ್ ಪಾಠಗಳ ಪರಿಷ್ಕರಣ ಕಾರ್ಯಾಗಾರ  ನಡೆಸಿತು.

(8) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2009-ಅಕ್ಟೋಬರ್-30 ಮತ್ತು 31 ಎರಡು ದಿನಗಳು “ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮ ಶತಮಾನೋತ್ಸವ” ಅಂಗವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ವನ್ನು ನಡೆಸಿತು.

(9) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2009-ಅಕ್ಟೋಬರ್-30 ಮತ್ತು 31 ಎರಡು ದಿನಗಳು “ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮ ಶತಮಾನೋತ್ಸವ” ಅಂಗವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ನಡೆಸಿತು.

(10) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2009-ಜೂನ್-24, 25, 26 ಮೂರು ದಿನಗಳು “ಪ್ರಾಚೀನ ಕನ್ನಡ ಕಾವ್ಯ : ಓದು- ವ್ಯಾಖ್ಯಾನ” ಕುರಿತು ರಾಜ್ಯ ಮಟ್ಟದ ಕಮ್ಮಟ ನಡೆಸಿತು.

(11) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯನಿಲಯ, ಮೈಸೂರು ಮತ್ತು ದೂರ ಶಿಕ್ಷಣ ಕೌನ್ಸಿಲ್, ನವ ದೆಹಲಿ ಇವರ ಸಹಯೋಗದೊಂದಿಗೆ 2009-ಮೇ-21 ಮತ್ತು 22 ಎರಡು ದಿನಗಳು “ದೂರ ಶಿಕ್ಷಣದಲ್ಲಿ. ನವೀನ ಆಲೋಚನೆಗಳು” ಕುರಿತು ಓರಿಯೆಂಟೇಷನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು.

(12) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯನಿಲಯ, ಮೈಸೂರು ಮತ್ತು ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರ ಇವರ ಸಹಯೋಗದೊಂದಿಗೆ 2015-ಮೇ-14 ರಂದು “ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು ವೇಗಗೊಳಿಸುವುದು-ಸಮಸ್ಯೆಗಳು ಮತ್ತು ಸವಾಲುಗಳು” ವಿಷಯ ಕುರಿತು ಒ೦ದು ದಿನದ ಕಾರ್ಯಾಗಾರ  ಹಮ್ಮಿಕೊಳ್ಳಲಾಗಿತ್ತು.

key words: KSOU, Karnataka state open university, Kannada department, KSOU