ಆರು ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ.

 ಬೆಂಗಳೂರು,ಜೂನ್,13,2024 (www.justkannada.in): ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ 6 ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ( ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಉಮಾದೇವಿ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ’ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 6 ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ..

1.ಸಯಿದಾ ಆಯಿಷಾ ( ಸ್ಥಳ ನಿರೀಕ್ಷಣೆ) – ‘ಮುಖ್ಯ ಆಡಳಿತಾಧಿಕಾರಿ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ.

  1. ವಿಶ್ವನಾಥ ಪಿ. ಹಿರೇಮಠ (ಸ್ಥಳ ನಿರೀಕ್ಷಣೆ) –ಮುಖ್ಯ ಆಡಳಿತಾಧಿಕಾರಿ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
  2. ಆರತಿ ಆನಂದ್ (ಸ್ಥಳ ನಿರೀಕ್ಷಣೆ) – ಮುಖ್ಯ ಆಡಳಿತಾಧಿಕಾರಿ, ಚಿಕ್ಕಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
  3. ಸೀಮಾ ನಾಯ್ಕ್. ಬಿ – ವಿಶೇಷ ಜಿಲ್ಲಾಧಿಕಾರಿ( ಭೂಸ್ವಾಧೀನ) ಹುಬ್ಬಳ್ಳಿ-ಅಂಕೋಲ ರೈಲ್ವೆ ಬ್ರಾಡ್ ಗೇಸ್ ಯೋಜನೆ, ಕಾರವಾರ ಹುದ್ದೆಗೆ

5.ಆದ ಫಾತಿಮಾ-  ಪ್ರಧಾನ ವ್ಯವಸ್ಥಾಪಕರು , ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಹುದ್ದೆಗೆ.

  1. ಡಾ.ಶರಣಪ್ಪ. ಬಿ – ಸಹಾಯಕ ಆಯುಕ್ತರು (ಚುನಾವಣೆ) ಬಿಬಿಎಂಪಿ ಬೆಂಗಳೂರು ಹುದ್ದೆಗೆ

Key words: State government, transfer, KAS officers