ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸಿಎಂ ಸಿದ್ದರಾಮಯ್ಯಗೆ ಬಿವೈ ವಿಜಯೇಂದ್ರ ಸವಾಲು.

ಬೆಂಗಳೂರು, ಜೂನ್,17,2024 (www.justkannada.in): ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನ ಸಮರ್ಥನೆ ಮಾಡಿಕೊಂಡಿರುವ  ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸವಾಲು ಹಾಕಿದ್ದಾರೆ.

 ಪೆಟ್ರೋಲ್‌ ಮತ್ತು ಡೀಸೆಲ್‌  ಏರಿಕೆ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುವ ಬದಲು ನಮ ರಾಜ್ಯದಿಂದಲೇ ಮೊದಲು ದರ ಕಡಿಮೆ ಮಾಡಿ ನಂತರ ಮಾತನಾಡಿ ಎಂದು  ಸಿಎಂ ಸಿದ್ದರಾಮಯ್ಯಗೆ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಅವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ತಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಬೇರೆ ರಾಜ್ಯಗಳ ಉದಾಹರಣೆ ಕೊಡುವುದು ನಮಗೆ ಬೇಡ. ಮೊದಲು ಕರ್ನಾಟಕದಿಂದಲೇ ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡಿ ಬಳಿಕ ಇನ್ನೊಂದು ರಾಜ್ಯದ ಉದಾಹರಣೆ ಕೊಡಿ ಎಂದರು.

ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ಬೆಲೆ ಏರಿಕೆ ಹೆಚ್ಚಳ ಜನರಿಗೆ ಬರದ ಗ್ಯಾರಂಟಿ ಕೊಡುತ್ತಿದೆ. ಇದೊಂದು ಜನ ವಿರೋಧಿ ಸರ್ಕಾರ. ಬಡವರ ಮೇಲಿನ ತೆರಿಗೆ ಬರೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

Key words: Petrol, diesel, price , hike, BY Vijayendra