ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ನಟ ದರ್ಶನ್ ಸೇರಿ ಆರೋಪಿಗಳ ಕರೆತಂದು ಸ್ಥಳ ಮಜಹರು.

ಬೆಂಗಳೂರು,ಜೂನ್,17,2024 (www.justkannada.in):  ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಪಾರ್ಟಿ ಮಾಡಿದ್ದ ರೆಸ್ಟೋರೆಂಟ್ ಗೆ ನಟ ದರ್ಶನ್ ಸೇರಿ ಕೆಲ ಆರೋಪಿಗಳನ್ನ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದರು.

ಆರ್. ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ನಟ ದರ್ಶನ್, ಹಾಸ್ಯನಟ ಚಿಕ್ಕಣ್ಣ, ಮಾಲೀಕ ವಿನಯ್ ಸೇರಿ ಕೆಲ ಆರೋಪಿಗಳನ್ನ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದರು.

ರೇಣುಕಾಸ್ವಾಮಿ ಹತ್ಯೆಗೂ ಮುನ್ನ ನಟ ದರ್ಶನ್ ಅಂಡ್ ಗ್ಯಾಂಗ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ನಟ ದರ್ಶನ್ ಜೊತೆ ಹಾಸ್ಯನಟ ಚಿಕ್ಕಣ್ಣ ಸಹ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇದೀಗ ಸ್ಥಳಮಹಜರು ಬಳಿಕ ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Key words: muder case, Actor, Darshan, Stony Brook restaurant