Monday, August 3, 2026

BDA Apartments

Home Crime ವಾಕಿಂಗ್ ಹೋಗುತ್ತಿದ್ದವರ ಮೇಲೆ ಹರಿದ ಗೂಡ್ಸ್; ಸ್ಥಳದಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

ವಾಕಿಂಗ್ ಹೋಗುತ್ತಿದ್ದವರ ಮೇಲೆ ಹರಿದ ಗೂಡ್ಸ್; ಸ್ಥಳದಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

ಹಾಸನ:ಜುಲೈ-14:(www.justkannada.in) ವಾಕಿಂಗ್ ಹೋಗಿ ಬರುತ್ತೇವೆಂದು ಹೊರಟ್ಟಿದ್ದವರ ಮೇಲೆ ಬೊಲೆರೋ ಗೂಡ್ಸ್ ವಾಹನವೊಂದು ಹರಿದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಹಡೇನಹಳ್ಳಿ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮುಂಜಾನೆ 5:30ರ ಸುಮಾರಿಗೆ ಬರಾಳು ಗ್ರಾಮದ ನಿವಾಸಿ ಹೇಮರಾಜ್, ನಾಗಣ್ಣ, ರವಿ, ಅನಿಲ್ ಅವರು ವಾಕಿಂಗ್‍ಗೆ ಹೊರಟ್ಟಿದ್ದರು. ಈ ವೇಳೆ ವೇಗದಿಂದ ಬಂದ ಬೊಲೆರೋ ಗೂಡ್ಸ್ ಮೊದಲು ನಾಗಣ್ಣ, ರವಿಗೆ ಡಿಕ್ಕಿ ಹೊಡೆದು, ನಂತರ ಹೇಮರಾಜ್‍ಗೂ ಗುದ್ದಿದೆ. ಘಟನೆಯಿಂದಾಗಿ ತೀವ್ರ ಗಾಯಗೊಂಡ ಹೇಮರಾಜ್(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರವಣಬೆಳಗೊಳ ಪೊಲೀಸರು ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಾಕಿಂಗ್ ಹೋಗುತ್ತಿದ್ದವರ ಮೇಲೆ ಹರಿದ ಗೂಡ್ಸ್; ಸ್ಥಳದಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

Hasana,accident,goods vehicle hits,man dead