Sunday, August 2, 2026

BDA Apartments

Home Front Page ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ರೇಣುಕಾಚಾರ್ಯ…

ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ರೇಣುಕಾಚಾರ್ಯ…

ಬೆಂಗಳೂರು,ಜು,14,2019(www.justkannada.in):  ಸಮ್ಮಿಶ್ರ ಸರ್ಕಾರದ ಬಳಿ 99 ಸೀಟು ಮಾತ್ರ ಇದೆ. ಹೀಗಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ರೇಣುಕಾಚಾರ್ಯ,  ಸಮ್ಮಿಶ್ರ ಸರ್ಕಾರಕ್ಕೆ ಸಂತಾಪ ಸೂಚಿಸುವ ಕಾಲ ಬಂದಿದೆ. ಸಭಾಧ್ಯಕ್ಷರ ಬಳಿ ಬಿಎಸ್ ವೈ ಮಾತನಾಡಿದ್ದಾರೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ  ಬಂಡ ಧೈರ್ಯ ಮಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಅವರಿಗೆ ಬಹುಮತ ಸಾಭೀತು ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹಾಗೆಯೇ ಹೆಚ್.ಡಿ ರೇವಣ್ಣ ವಾಮಾಚಾರ ಮಾಡುತ್ತಿದ್ದಾರೆ. ತಮ್ಮ ಕುಟುಂಬ ಮಮ್ಮು ಸ್ವಾರ್ಥಕ್ಕೋಸ್ಕರ ವಾಮಾಚಾರ ಮಾಡುತ್ತಿದ್ದಾರೆ. ವಾಮಾಚಾರ ಮಾಡಿ ತುಮಕೂರಿನಲ್ಲಿ ಹೆಚ್.ಡಿ ದೇವೇಗೌಡರನ್ನ ಬಲಿ ಕೊಟ್ಟರು. ನಾಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನೂ ಬಲಿ ಕೊಡ್ತಾರೆ ಎಂದು ವ್ಯಂಗ್ಯವಾಡಿದರು.

Key words:  coalition government- cannot -prove -mejority –BJP- MLA Renukacharya.