Thursday, August 20, 2026

BDA Apartments

Home Front Page ಎಲೆ ತೋಟ ಸರ್ಕಲ್‌ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರು ನಾಮಾಂಕಿತ: ನಾಮಫಲಕ ಲೋಕಾರ್ಪಣೆ…

ಎಲೆ ತೋಟ ಸರ್ಕಲ್‌ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರು ನಾಮಾಂಕಿತ: ನಾಮಫಲಕ ಲೋಕಾರ್ಪಣೆ…

ಮೈಸೂರು,ಜು,14,2019(www.justkannada.in): ನಗರದ ಎಲೆ ತೋಟ ಸರ್ಕಲ್‌ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರು ನಾಮಾಂಕಿತ ಮಾಡಲಾಗಿದ್ದು ನಾಮಫಲಕವನ್ನ ಮೈಸೂರು ನಗರ ಪಾಲಿಕೆ ವತಿಯಿಂದ ಉದ್ಘಾಟನೆ ಮಾಡಲಾಯಿತು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವೃತ್ತಕ್ಕೆ  ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರು ಮಾಡಲು ಪಾಲಿಕೆ ಮುಂದಾಗಿತ್ತು.  ಹಲವು ವಿರೋಧಗಳ ನಡುವೆ ಪಾಲಿಕೆ  ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹೆಸರನ್ನ ಎಲೆ ತೋಟ ಸರ್ಕಲ್‌ಗೆ ಇಡಲು ಫೈನಲ್  ಮಾಡಿತ್ತು.

ಇದೀಗ ಇಂದು  ಪಾಲಿಕೆಯಿಂದಲೇ ನಾಮಫಲಕ ಅಳವಡಿಕೆ ಮಾಡಲಾಗಿದ್ದು, ನಾಮಫಲಕವನ್ನ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಸುತ್ತುರು ಮಠದ ಕಿರಿಯ ಶ್ರೀದತ್ತ ವಿಜಯಾನಾಂದ ತೀರ್ಥ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದರು.

ಸಂದೇಶ್ ಸ್ವಾಮಿ ಮೇಯರ್ ಆಗಿದ್ದಾಗಲೇ ವೃತ್ತಕ್ಕೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರಿಡಲು ಮನವಿ ಮಾಡಲಾಗಿತ್ತು. ಸುಮಾರು ವರ್ಷಗಳ ನಂತರ ಇದಕ್ಕೆ ಕಾಲ ಕೂಡಿ ಬಂದಿದೆ. ಇನ್ನು ಪಾಲಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Key words: Name -Ganapati Sachidananda Swamiji –elethota Circle-mysore