ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು, ಎರಡೂ ಕಾಲು ಕಳೆದುಕೊಂಡ ವ್ಯಕ್ತಿ

kannada t-shirts

ಯಾದಗಿರಿ:ಜುಲೈ-14:(www.justkannada.in) ರೈಲಿನಲ್ಲಿ ಸೀಟು ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಯರಗೋಳ ಗ್ರಾಮದ ನಂದು ಬಡಿಗೇರ್​​​​​​ ಅಪಘಾತಕ್ಕೀಡಾದ ವ್ಯಕ್ತಿ. ಸೋಲ್ಲಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೋಲ್ಲಾಪುರ ಎಕ್ಸ್​​ಪ್ರೆಸ್​​​​ ಶನಿವಾರ ತಡರಾತ್ರಿ ಯಾದಗಿರಿ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲು ಏರಲು ಪ್ರಯತ್ನಿಸಿದ ನಂದು, ಆಯತಪ್ಪಿ ರೈಲು ಮತ್ತು ಪ್ಲಾಟ್​ಫಾರಂ ನಡುವೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಆತನೆರಡು ಕಾಲುಗಳು ನಜ್ಜುಗುಜ್ಜಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂದು ಅವರನ್ನು ಆರ್​​ಪಿಎಫ್​​ ಸಿಬ್ಬಂದಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾಲುಗಳು ಸಂಪೂರ್ಣ ನುಜ್ಜುಗುಜ್ಜಾದ ಹಿನ್ನಲೆಯಲ್ಲಿ ಕಲನ್ನೇ ಕಳೆದೊಂಡಿದ್ದಾರೆ.

ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು, ಎರಡೂ ಕಾಲು ಕಳೆದುಕೊಂಡ ವ್ಯಕ್ತಿ
Yadagiri,Train accident,passenger,two legs laps

website developers in mysore