ಮುಂಬೈಗೆ ಹಾರಿದ ‘ಕೈ’ ಶಾಸಕ ಎಂಟಿಬಿ ನಾಗರಾಜ್…

ಬೆಂಗಳೂರು,ಜು,14,2019(www.justkannada.in):  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಮನವೊಲಿಕೆಗೆ ಬಗ್ಗಿದ್ದ ಕಾಂಗ್ರಸ್ ಶಾಸಕ ಎಂಟಿಬಿ ನಾಗರಾಜ್ ಇದೀಗ ಮುಂಬೈನತ್ತ ಪ್ರಯಾಣ ಬೆಳಿಸಿದ್ದಾರೆ.

ನಿನ್ನೆ ಸಚಿವ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಎಂಟಿಬಿ ನಾಗಾರಾಜ್ ಮನವೊಲಿಸಿದ್ದರು. ನಂತರ ‘ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ’ ಎಂದು ಎಂ. ಟಿ. ಬಿ.ನಾಗರಾಜ್ ಘೋಷಣೆ ಮಾಡಿದ್ದರು.

ಇಂದು ಬೆಳಿಗ್ಗೆ ಮಾತನಾಡಿದ್ದ ಎಂ,ಟಿಬಿ ನಾಗರಾಜ್,ಮಧ್ಯಾಹ್ನದ ಬಳಿಕ ಸುಧಾಕರ್ ಅವರನ್ನ ಭೇಟಿ ಮಾಡಿ  ಮನವೊಲಿಸುವ ಪ್ರಯತ್ನ ಮಾಡುವೆ. ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಮ್ಮ ನಾಯಕರು . ಮುಂಬೈಗೆ ಹೋಗುವುದಾದರೇ ನಿನ್ನೆ ರಾತ್ರಿಯೇ ಹೋಗುತ್ತಿದ್ದೆ.  ನಮ್ಮ ಕ್ಷೇತ್ರದ ಅಭಿವೃದ್ದಿ ಮುಖ್ಯ  ಸುಧಾಕರ್ ಸಿಗದಿದ್ದರೇ ನಾಳೆ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದರು.

ಇದೀಗ ಶಾಸಕ ಎಂಟಿಬಿ ನಾಗರಾಜ್ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎಂ.ಟಿ.ಬಿ ನಾಗರಾಜ್ ಅವರನ್ನು ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಎಸ್. ಆರ್ ವಿಶ್ವನಾಥ್ ಕಳುಹಿಸಿಕೊಟ್ಟರು ಎಂಬ ಮಾಹಿತಿ ಲಭ್ಯವಾಗಿದೆ.

Key words: Congress- legislator -MTB Nagaraj-Mumbai.