‘’ಗೋವಿನ ಮಾಂಸ ತಿನ್ನುತ್ತೇನೆ’’ ಎಂದು ಹೇಳುವುದು ದುರಹಂಕಾರದ ಪರಮಾವಧಿ : ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು,ಡಿಸೆಂಬರ್,29,2020(www.justkannada.in) : ಆಹಾರಪದ್ಧತಿ ಅವರವರ ವೈಯಕ್ತಿಕವಾದ ವಿಚಾರ ಯಾರೊಬ್ಬರೂ ಕೂಡ ಇಂತಹದ್ದೇ ಆಹಾರ ತಿನ್ನಬೇಕು ಎಂದು ಒತ್ತಾಯಿಸುವುದಿಲ್ಲ. ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಗೋವಿನ ಮಾಂಸ ತಿನ್ನುತ್ತೇನೆ ಎಂದು ಹೇಳುವುದು ದುರಹಂಕಾರದ ಪರಮಾವಧಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ನಾನು ದನದ ಮಾಂಸ ತಿನ್ನುತ್ತೇನೆ ಅದನ್ನು ಕೇಳಲು ಅವನ್ಯಾರು ಎಂದು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೇಷರತ್ತಾಗಿ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. 

ದನದ ಮಾಂಸ ಸೇವಿಸಬಾರದು ಎಂದು ರಾಜ್ಯ ಸರ್ಕಾರ ಎಲ್ಲಿಯೂ ಹೇಳಿಲ್ಲ. ಗೋವುಗಳ ವಧೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಆದರೆ, ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ತೃಪ್ತಿಪಡಿಸಲು ಇಂತಹ ಕ್ಷುಲ್ಲಕ ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.

 

ಧರ್ಮಸ್ಥಳಕ್ಕೆ ಹೋಗಿ ಮಂಜುನಾಥಸ್ವಾಮಿ ದರ್ಶನ ಮಾಡಿ ಬಂದಾಗ ನಾನು ಮೀನು ತಿಂದು ಹೋಗಿದ್ದೆ ಎಂದು ಹೇಳಿದ್ದೀರಿ. ಇದರ ಪರಿಣಾಮ ಏನಾಯಿತು ಎಂಬುದು ನಿಮಗೆ ಗೊತ್ತು. ವಿಧಾನಸಭಾ ಚುನಾವಣೆಯಲ್ಲಿ 132 ಸ್ಥಾನದಿಂದ 78 ಸ್ಥಾನಕ್ಕೆ ಕುಸಿಯಿತು. ಸ್ವತಃ ಚಾಮುಂಡೇಶ್ವರಿಯಲ್ಲಿ ಜನ ನಿಮ್ಮ ಕೈ ಹಿಡಿಯಲಿಲ್ಲ. ನೀವು ಹೀಗೆ ಉದ್ದಟತನ ಪ್ರದರ್ಶಿಸಿದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

 

ತಾಕತ್ತಿದ್ದರೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿ…!

 

ಹನುಮಂತ ಹಿಂದೂಗಳ ಆರಾಧ್ಯ ದೈವ. ಹನುಮಂತ ಎಲ್ಲಿ ಹುಟ್ಟಿದ? ಅವನ ಹುಟ್ಟಿದ ದಿನಾಂಕ ಯಾವುದು ಎಂದು ಕೇಳುವ ನಿಮಗೆ ತಾಕತ್ತಿದ್ದರೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಲಿ. ಟಿಪ್ಪು ಸುಲ್ತಾನ್ ಎಲ್ಲಿ ಹುಟ್ಟಿದ, ಯಾವಾಗ ಹುಟ್ಟಿದ, ಅವನ ಹಿನ್ನಲೆ ನಿಮಗೇನಾದರೂ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ.

 

ನಿಮ್ಮ ಹೇಳಿಕೆಗಳನ್ನು ನಿಮ್ಮದೇ ಪಕ್ಷದವರು ಒಪ್ಪುತ್ತಿಲ್ಲ

ಹಿಂದೂ ದೇವತೆಗಳ ಬಗ್ಗೆ ಮಾತನಾಡಿದರೆ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆಂಬ ಭ್ರಮೆಯಲ್ಲಿದ್ದೀರಿ. ನಿಮ್ಮ ಹೇಳಿಕೆಗಳನ್ನು ನಿಮ್ಮದೇ ಪಕ್ಷದವರು ಒಪ್ಪುತ್ತಿಲ್ಲ. ರೀತಿ ಹಿಂದೂಗಳ ಮನಸ್ಸಿಗೆ ಪದೇ ಪದೇ ಧಕ್ಕೆ ತಂದ ಪರಿಣಾಮವೇ ಎರಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಧಿಕೃತ ವಿರೋಧಪಕ್ಷದ ಸ್ಥಾನವನ್ನೇ ನೀಡಲಿಲ್ಲ ಎಂದು ಟೀಕಿಸಿದ್ದಾರೆ.

Govin meat-eat-say-Arrogant-Extreme-MP Renukaacharyaಈಗಾಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್ಗೆ ಉಳಿಗಾಲವಿಲ್ಲ. ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ವಿಷಯದಲ್ಲಿ ಯಾರೋಬ್ಬರೂ ರಾಜಕಾರಣ ಮಾಡಬಾರದು, ಸಾವಿನಲ್ಲಿ ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಅವರ ಆತ್ಮಹತ್ಯೆಗೆ ಏನೇ ಕಾರಣಗಳಿರಬಹುದು. ನಾವು ಸಂತಾಪ ಸೂಚಿಸಬೇಕೆ ಹೊರತು ರಾಜಕಾರಣ ಮಾಡುವುದು ಸರಿಯಲ್ಲ ತಿಳಿಸಿದ್ದಾರೆ.

key words : Govin meat-eat-say-Arrogant-Extreme-MP Renukaacharya