ಟೆಸ್ಟ್ ಚಾಂಪಿಯನ್‌ಶಿಪ್‌ ಕಿವೀಸ್ ಗೆಲುವಿನ ಕುರಿತು ರವಿಶಾಸ್ತ್ರಿ ಹೇಳಿದ್ದೇನು?!

ಬೆಂಗಳೂರು, ಜೂನ್ 25, 2021 (www.justkannada.in): ನ್ಯೂಜಿಲೆಂಡ್ ಗೆಲುವಿಗೆ ಅರ್ಹ ತಂಡ ಎಂದ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಗೆಲುವಿಗೆ ನ್ಯೂಜಿಲೆಂಡ್ ಅರ್ಹವಾದ ತಂಡ ಎಂದು ರವಿಶಾಸ್ತ್ರಿ ಶ್ಲಾಘಿಸಿದ್ದಾರೆ. ಜತೆಗೆ ನ್ಯೂಜಿಲೆಂಡ್ ತಂಡಕ್ಕೆ ಟ್ವಿಟ್ಟರ್ ನಲ್ಲಿ ಶುಭಹಾರೈಸಿದ್ದಾರೆ.

ವಿಶ್ವ ಚಾಂಪಿಯನ್ ಪಟ್ಟಕ್ಕೆ ಸುದೀರ್ಘ ಕಾಲ ಕಾಯುವಿಕೆಯ ನಂತರ ಸುದೀರ್ಘ ಮಾದರಿಯಲ್ಲಿ ಅರ್ಹ ಗೆಲುವನ್ನು ಪಡೆದಿದೆ. ದೊಡ್ಡ ಸಂಗತಿಗಳು ಸುಲಭವಾಗಿ ದಕ್ಕುವುದಿಲ್ಲ ಎಂದಿದ್ದಾರೆ.

ಇದು ನ್ಯೂಜಿಲೆಂಡ್ ತಂಡದ ಅದ್ಭುತವಾದ ಪ್ರಯಾಣವಾಗಿದೆ. ಕಳೆದ ಕೆಲ ವರ್ಷಗಳಿಂದ ಬೃಹತ್ ಗೆಲುವಿಗೆ ಅತ್ಯಂತ ಸನಿಹಕ್ಕೆ ತಲುಪಿದ್ದರು. ಇದೀಗ ಅದು ಸಂಪೂರ್ಣವಾಗಿ ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.