Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಹೆಚ್.ಡಿಕೆಗೆ ಆತ್ಮ ಅನ್ನೋದೇ ಇಲ್ಲ, ಇನ್ನು ಆತ್ಮಸಾಕ್ಷಿ ಎಲ್ಲಿಂದ ಬರುತ್ತೆ- ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಹೆಚ್.ಡಿಕೆಗೆ ಆತ್ಮ ಅನ್ನೋದೇ ಇಲ್ಲ, ಇನ್ನು ಆತ್ಮಸಾಕ್ಷಿ ಎಲ್ಲಿಂದ ಬರುತ್ತೆ- ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,27,2024(www.justkannada.in): ಹೆಚ್.ಡಿ ಕುಮಾರಸ್ವಾಮಿಗೆ ಆತ್ಮ ಅನ್ನೋದೇ ಇಲ್ಲ, ಇನ್ನು ಆತ್ಮಸಾಕ್ಷಿ ಎಲ್ಲಿಂದ ಬರುತ್ತೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಈಗಾಗಲೇ ಮೂರು ಪಕ್ಷದ ಎಲ್ಲಾ ನಾಯಕರು ಮತದಾನ ಚಲಾಯಿಸಿದ್ದಾರೆ

ಮತದಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಶಾಸಕರಿಗೆ ಆಮಿಷ ಆಸೆ ಒಡ್ಡುತ್ತಿದ್ದಾರೆ.  ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಜೆಡಿಎಸ್ ಗೆ ಇರೋದೇ 19 ಮತಗಳು  ಅಭ್ಯರ್ಥಿ ಹಾಕಬೇಕಿರಲಿಲ್ಲ. ಆದರೂ ಹಾಕಿದ್ದಾರೆ . ಬೇರೆ ಪಕ್ಷದವರೂ ನಮಗೆ ವೋಟ್ ಹಾಕಬಹುದು ಎಂದರು.

ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವವರು ಬೇರೆ ಪಕ್ಷದ ಶಾಸಕರಿಂದ ಮತಗಳು ಬರಬಹುದು. ನಾವು ಯಾವತ್ತೂ ಕೂಡ ಬೇರೆ ಶಾಸಕರಿಗೆ ಆಮಿಷ ಒಡ್ಡಿಲ್ಲ. ನಮಗೆ ಒಳ್ಳೆಯ ಮತದಾನಗಳು ಇರುವಾಗ ಆಮಿಷ ಹೊಡುವ ಪ್ರಮೇಯವೇ ಬರುವುದಿಲ್ಲ ಎಂದರು.

Key words: HDK -no soul- conscience – CM Siddaramaiah –rajya sabha-election