Sunday, August 23, 2026

BDA Apartments

Home Front Page ಹೆಡ್ ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ:  ಡ್ರೈವರ್ ಸೇರಿ ಮೂವರು ಸಸ್ಪೆಂಡ್

ಹೆಡ್ ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ:  ಡ್ರೈವರ್ ಸೇರಿ ಮೂವರು ಸಸ್ಪೆಂಡ್

ಕಲಬುರ್ಗಿ,ಜುಲೈ,6,2026 (www.justkannada.in):  ಗೃಹ ಸಚಿವರ ತವರು ಕಲ್ಬುರ್ಗಿಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಡ್ರೈವರ್ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.

ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಕ ಬಸವರಾಜ್, ಚಾಲಕ ಆಕಾಶ್ ಎಂಬುವವರನ್ನು ಅಮಾನತು ಮಾಡಿ ವಿಭಾಗಿಯ ನಿಯಂತ್ರಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಜುಲೈ 5 ರಂದು ಕಲ್ಬುರ್ಗಿಯಿಂದ ಚಿಂಚೋಳಿ ಕಡೆಗೆ  ಬಸ್ ತೆರಳುತ್ತಿತ್ತು. ಕಲಬುರಗಿ-ಚಿಂಚೋಳಿ ಮಾರ್ಗದಲ್ಲಿ ರಾತ್ರಿ 7.30ಕ್ಕೆ ಕಲಬುರಗಿಯಿಂದ  ತೆರಳುತ್ತಿದ್ದ ಕೆಕೆಆರ್​ಟಿಸಿ ಬಸ್​  ಹೆಡ್ ಲೈಟ್ ಇಲ್ಲದಿದ್ದರೂ ಕೂಡ ಮೊಬೈಲ್ ಟಾರ್ಚ್ ನಲ್ಲಿ ಬಸ್  ಚಾಲನೆ ಮಾಡಲಾಗಿತ್ತು.

ಈ ಘಟನೆ ನಡೆದ ಬೆನ್ನಲ್ಲೇ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Key words: Bus driving, torch light, Three, suspended