Monday, October 5, 2026

BDA Apartments

ಅಂಧ ಗಾಯಕಿಯರಿಗೆ ಮನೆ ನಿರ್ಮಿಸಿಕೊಟ್ಟ ನಟ ಜಗ್ಗೇಶ್ BDA JK_Adv BDA Adv
Home Front Page SIR ಪ್ರಕ್ರಿಯೆ: ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು- ಸಿಎಂ ಡಿಕೆ ಶಿವಕುಮಾರ್

SIR ಪ್ರಕ್ರಿಯೆ: ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮೇ,6,2026 (www.justkannada.in): ಎಸ್ ಐಆರ್ ಬಗ್ಗೆ ಜಾಹೀರಾತು ನೀಡುತ್ತಿದ್ದೇವೆ. ಜಾಗೃತಿ ಮೂಡಿಸುತ್ತಿದ್ದೇವೆ. ಹೀಗಾಗಿ  ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಜನರಿಗೆ ಆರ್ಥಿಕ ಸಹಾಯ ಆಗಬೇಕು ಎಂದು ಗ್ಯಾರಂಟಿ ಕೊಟ್ಟಿದ್ದೇವೆ. ನಾವು ಗ್ಯಾರಂಟಿ ಕೊಟ್ಟ ಮೇಲೆ ಕೇಂದ್ರದವರು ಅಳವಡಿಸುತ್ತಿದ್ದಾರೆ.  ಎಸ್ ಐಆರ್ ಬಗ್ಗೆ ಜಾಹೀರಾತು ನೀಡುತ್ತಿದ್ದೇವೆ. ಜಾಗೃತಿ ಮೂಡಿಸುತ್ತಿದ್ದೇವೆ.  ಎಲ್ಲರಿಗೂ ಮತದಾನದ ಹಕ್ಕು ನೀಡುತ್ತಿದ್ದೇವೆ.  ನಾವು ಮಾಡಿದ ಕೆಲಸಕ್ಕೆ ಪ್ರತಿಪಕ್ಷದವರು ಅಭಿನಂದನೆ ಸಲ್ಲಿಸಬೇಕು. ನಾನೂ ಸಹ ಹುಷಾರಾಗಿರಿ ಎಂದು ನಮ್ಮ ಪಕ್ಷದವರಿಗೆ ಹೇಳಿದ್ದೇವೆ.  ಪ್ರತಿಪಕ್ಷದವರು ಟೀಕೆ ಮಾಡುವುದಕ್ಕೆ ಮಾತ್ರ ಮಾತನಾಡುತ್ತಾರೆ ಎಂದರು.SIR ಪ್ರಕ್ರಿಯೆ: ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು- ಸಿಎ...

ಎಸ್ ಐಆರ್ ವಿಚಾರದಲ್ಲಿ ನಮ್ಮದೇ ಆದ ಅಭಿಪ್ರಾಯವಿದೆ. ನಾವು ಎಲ್ಲರಿಗೂ ಮತ ಕೊಡಬೇಕು ಅಂತಾ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.  ಈಗ ಎಲ್ಲರಿಗೂ ಜಾಗೃತಿ ಮೂಡಿಸುತ್ತಿದ್ದೇವೆ. ಎಲ್ಲಾ ಸಂಘ ಸಂಸ್ಥೆಯವರು ಕೂಡ ಕೆಲಸ ಮಾಡುತ್ತಿದ್ದರು. ಎಸ್ ಐಆರ್ ನಲ್ಲಿ ಸರ್ಕಾರ ಕೂಡ ಮಧ್ಯ ಪ್ರವೇಶ ಮಾಡಲ್ಲ. ಸರ್ಕಾರ ಜಾಗೃತಿ ಮೂಡಿಸುತ್ತಿದೆ ಅಂತಾ  ವಿಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು  ಸಿಎಂ ಡಿಕೆ ಶಿವಕುಮಾರ್ ಟೀಕಿಸಿದರು.SIR ಪ್ರಕ್ರಿಯೆ jk02_new jk02 new

Key words: SIR, process, Opposition, congratulate, our work, CM, DK Shivakumar