ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಯೋಗ ಪ್ರದರ್ಶನ: 300ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿ…

ಮೈಸೂರು,ಜೂ,21,2019(www.justkannada.in): ಜಾಗತಿಕ ಶಾಂತಿ, ಸಾಮರಸ್ಯ ಮತ್ತು ಪ್ರಗತಿಯ ಉತ್ತೇಜನಕ್ಕಾಗಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಂದಿಗೆ, ನೈಋತ್ಯ ರೈಲ್ವೆ ಮೈಸೂರು ವಿಭಾಗವು ಇಂದು ಬೆಳಿಗ್ಗೆ ರೈಲ್ವೆ ಕ್ರೀಡಾ ಮೈದಾನದಲ್ಲಿ ಯೋಗ ದಿನವನ್ನು ಆಚರಿಸಿತು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಅಪರ್ಣ ಗರ್ಗ್ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಂದು ಗಂಟೆ ಕಾಲ ನಡೆದ ಯೋಗ ಕಾರ್ಯಕ್ರಮದಲ್ಲಿ  ವಿಭಾಗದ 300ಕ್ಕೂ ಹೆಚ್ಚು ಅಧಿಕಾರಿಗಳು / ಸಿಬ್ಬಂದಿಯನ್ನು ಮುನ್ನಡೆಸಿದರು. ಯೋಗ ಆರಾಧನ ಕೇಂದ್ರದ ಮುಖ್ಯ ಶಿಕ್ಷಕರಾದ  ರಘು ಅವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು. ಯೋಗ ಉತ್ಸಾಹಿಗಳಿಗೆ ಶಿಕ್ಷಕರಿಂದ ಸಾಮಾನ್ಯ ಯೋಗ ಶಿಷ್ಟಾಚಾರದ ಪ್ರಕಾರದ ಪ್ರಾಥಮಿಕ/ಮೂಲಭೂತ ಆಸನಗಳನ್ನು, ಅವುಗಳು ನೀಡುವ ಅಪಾರ ಪ್ರಯೋಜನಗಳನ್ನು ತಿಳಿಸುತ್ತಾ ಕಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಅಪರ್ಣ ಗರ್ಗ್  ಅವರು, ಯೋಗ ಪ್ರಿಯರಿಗೆ ಶುಭ ಕೋರಿದರು ಹಾಗೂ ಯೋಗವು ಸಮತೋಲನ ಮತ್ತು ಸಮಚಿತ್ತತೆಯ ಸ್ಥಿತಿ ಎಂದು ತಿಳಿಸುತ್ತಾ ಸನ್ಮಾನ್ಯ ಪ್ರಧಾನ ಮಂತ್ರಿಗಳ ಸಂದೇಶವನ್ನು ಓದಿದರು. ಯೋಗ ಉತ್ಸಾಹಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಮುಂಬರುವ ವರ್ಷಗಳಲ್ಲಿ ಯೋಗ ನೀಡುವ ಅಗಾಧ ಮತ್ತು ಸಮಗ್ರ ಆರೋಗ್ಯ ಪ್ರಯೋಜನಗಳಿಗಾಗಿ ಪ್ರತಿಯೊಬ್ಬರೂ ಅದನ್ನು ಸ್ವೀಕರಿಸುತ್ತಾರೆ ಎಂದು ಅವರು ಆಶಿಸಿದರು.

Key words: Yoga Southwest Railway- Mysore –Division-300 officers –participate