ಮೈಸೂರು ಮೇಯರ್ ಸ್ಥಾನ ಕೈತಪ್ಪಿದ ಹಿನ್ನೆಲೆ: ಕಣ್ಣೀರಿಡುತ್ತಾ ಪಾಲಿಕೆಯಿಂದ ಹೊರ ನಡೆದ ಬಿಜೆಪಿ ಅಭ್ಯರ್ಥಿ…

ಮೈಸೂರು,ಫೆಬ್ರವರಿ,4,2021(www.justkannada.in):  ಮೈಸೂರು ಮೇಯರ್ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ  ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ಭಾವುಕರಾಗಿ ಕಣ್ಣೀರಿಡುತ್ತಾ ಪಾಲಿಕೆಯಿಂದ ಹೊರ ನಡೆದ ಘಟನೆ ಕಂಡು ಬಂತು.jk

ಇಂದು ನಡೆದ ಮೈಸೂರು ಮೇಯರ್ ಹಾಗೂ ಉಪಮೇಯರ್  ಯಲ್ಲಿ ಕೊನೆಗಳಿಗೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಹಳೆ ದೋಸ್ತಿ ಮುಂದುವರೆಸಿದವು. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಧಿಕಾರಕ್ಕೇರುವ ಆಸೆ ಹೊಂದಿದ್ದ ಬಿಜೆಪಿಗೆ ನಿರಾಸೆಯಾಯಿತು. ಈ ಮಧ್ಯೆ  ಮೇಯರ್ ಸ್ಥಾನ ಕೈತಪ್ಪಿದ ಹಿನ್ನೆಲೆ,  ಬಿಜೆಪಿ ಮೇಯರ್ ಅಭ್ಯರ್ಥಿ ಸುನಂದ ಪಾಲನೇತ್ರ ಭಾವುಕರಾದರು.

ಬಳಿಕ ಈ ಕುರಿತು ಮಾತನಾಡಿದ ಅವರು, ಬೆನ್ನಿಗೆ ಚೂರಿ ಹಾಕಿಲ್ಲ. ಎದೆಗೆ ಚೂರಿ ಹಾಕಿದ್ದಾರೆ. ನನ್ನ ದುರಾದೃಷ್ಟದಿಂದ ಮೇಯರ್ ಸ್ಥಾನ ಕೈ ತಪ್ಪಿದೆ. ನನ್ನ ಬೆಂಬಲಿಸಿದ ಸಿಎಂ ಯಡಿಯೂರಪ್ಪ, ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಸ್ಥಳೀಯ ಮುಖಂಡರು ಶಾಸಕರಿಗೆ ಧನ್ಯವಾದಗಳು ಎಂದರು.Mysore mayor- King Maker- Non-party - BSP -members

ಇದು ನಾನು ಸೋಲೆಂದು ಭಾವಿಸಿಲ್ಲ ಇದು ನನ್ನ ಗೆಲುವು. ಕಾರ್ಯಕರ್ತರು ಯಾರೂ ನೊಂದುಕೊಳ್ಳಬೇಡಿ ಎಂದು ಮೇಯರ್ ಚುನಾವಣೆ ಸೋಲಿನ ಬಳಿಕೆ ಸುನಂದ ಪಾಲನೇತ್ರ  ಹೇಳಿದರು.

Key words: mayor –Mysore- BJP candidate –walks-  tears.