ದೇವೇಗೌಡರ ಕುಟುಂಬದ ಆಸ್ತಿ ಪೆನ್​ ಡ್ರೈವ್: ಹೆಚ್ ಡಿಕೆ ಹೇಳಿಕೆಗೆ ಡಿ.ಕೆ ಸುರೇಶ್ ತಿರುಗೇಟು.

ಬೆಂಗಳೂರು, ಮೇ, 2, 2024 (www.justkannada.in): ತಮ್ಮ ಕುಟುಂಬವನ್ನ ‘420 ಕುಟುಂಬ’ ಎಂಬ ಟೀಕಿಸಿದ್ದ  ಮಾಜಿ ಸಿಎಂ ಹೆಚ್. ​ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸಂಸದ  ಡಿ.ಕೆ ಸುರೇಶ್, ದೇವೇಗೌಡರ ಕುಟುಂಬದ ಆಸ್ತಿ ಪೆನ್​ ಡ್ರೈವ್. ಇನ್ನು ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಸುರೇಶ್,  ನಾನು ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ.  ದೇವೇಗೌಡರ ಕುಟುಂಬದ ಆಸ್ತಿ ಪೆನ್​ಡ್ರೈವ್​. ಇನ್ನು ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಎಲ್ಲವನ್ನೂ ದೇಶ ಹಾಗೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಬೇಕಿದ್ದರೆ ಅವರಿಗೆ ಮನಸ್ಸಿಗೆ ಬಂದಹಾಗೆ ಬೈದುಕೊಳ್ಳಲಿ. ಹಾಸನದ ಹೆಣ್ಣುಮಕ್ಕಳ ಮರ್ಯಾದೆ ಉಳಿಸಬೇಕು ಅಷ್ಟೇ. ನಾವು ಅವರನ್ನ ಕೆಣಕಿಲ್ಲ ಎಂದು  ಡಿ.ಕೆ ಸುರೇಶ್ ತಿಳಿಸಿದರು.

Key words: HD Deve Gowda, Family, Pen Drive, DK Suresh