ನೀರಿನೊಂದಿಗೆ ಅಕಸ್ಮಾತ್ ಆಗಿ ಕೃತಕ ಹಲ್ಲನ್ನು ನುಂಗಿದ ಮಹಿಳೆ ಸಾವು.

ಚೆನ್ನೈ ಜುಲೈ 15, 2021 (www.justkannada.in): ಚೆನ್ನೈ ನಗರದ ಓರ್ವ ಮಹಿಳಾ ನಿವಾಸಿಯೊಬ್ಬರು ಕಳೆದ ವಾರ ಅಕಸ್ಮಾತ್ ಆಗಿ ನೀರು ಕುಡಿಯುವಾಗ ಕೃತಕ ಹಲ್ಲನ್ನು ನುಂಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.jk

ವರದಿಯೊಂದರ ಪ್ರಕಾರ, ವಲಸರವಕ್ಕಂನ 43-ವರ್ಷ-ವಯಸ್ಸಿನ ಎಸ್.ರಾಜಲಕ್ಷ್ಮಿ ಎಂಬ ಗೃಹಿಣಿ ಜುಲೈ 4ರಂದು ನೀರು ಕುಡಿಯುವಾಗ ತನ್ನ ಬಾಯಿಯಲ್ಲಿದ್ದ ಮೂರು ಕೃತಕ ಹಲ್ಲುಗಳ ಪೈಕಿ ಒಂದು ಹಲ್ಲನ್ನು ಅಕಸ್ಮಾತ್ ಆಗಿ ನುಂಗಿಬಿಟ್ಟರು. ನಂತರ ಆಕೆ ಸ್ವಲ್ಪ ತಲೆ ಸುತ್ತು ಹಾಗೂ ವಾಂತಿ ಆಗುವ ಹಾಗೆ ಆಗುತ್ತಿದೆ ಎಂದು ತಮ್ಮ ಮನೆಯವರ ಬಳಿ ತಿಳಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಗಾಬರಿಯಾಗುವಂತಹ ವಿಚಾರವೇನೂ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ಆದರೆ ಮರು ದಿನ ಆಕೆಯನ್ನು ಪುನಃ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಮೃತ ದೇಹವನ್ನು ಪೋಸ್ಟ್ ಮಾರ್ಟಂ ಕಳಹಿಸಿ, ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ನ ಕಲಂ ೧೭೪ (ಅಸ್ವಾಭಾವಿಕ ಸಾವು) ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆ ರಾಜಲಕ್ಷ್ಮಿ ಅವರ ಕೃತಕ ಹಲ್ಲನ್ನು ಸುಮಾರು ಏಳು ವರ್ಷಗಳ ಹಿಂದೆ ಅಳವಡಿಸಲಾಗಿತ್ತಂತೆ. ಆದರೆ ಅದು ಸಡಿಲವಾಗಿರಬಹುದು ಎಂದು ಅನುಮಾನಿಸಿದ್ದಾರೆ.

ಸುದ್ದಿ ಮೂಲ: ಇಂಡಿಯಾ ಟುಡೆ

Key words: Woman- dies –accidentally- swallowing -artificial teeth -water