Sunday, August 23, 2026

BDA Apartments

Home Front Page ಪತ್ರಿಕೆಗಳಿಗೆ ಜಾಹೀರಾತು ಹಣ ನೀಡದ ಏಜೆನ್ಸಿಗಳ ಮೇಲೆ ಕಠಿಣ ಕ್ರಮ : ಡಾ.ಹರ್ಷ

ಪತ್ರಿಕೆಗಳಿಗೆ ಜಾಹೀರಾತು ಹಣ ನೀಡದ ಏಜೆನ್ಸಿಗಳ ಮೇಲೆ ಕಠಿಣ ಕ್ರಮ : ಡಾ.ಹರ್ಷ

ಬೆಂಗಳೂರು,ಆಗಸ್ಟ್,30,2020(www.justkannada.in) : ಪತ್ರಿಕೆಗಳಿಗೆ ಜಾಹೀರಾತು ಹಣ ಇನ್ನೂ ನೀಡದ ಏಜೆನ್ಸಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ದೂರು ಬಂದ ಏಜೆನ್ಸಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.

jk-logo-justkannada-logo

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಭೇಟಿಯಾದ ನಿಯೋಗದ ಜತೆ ಚರ್ಚೆ ಮಾಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ.

ಕೆಯುಡಬ್ಲ್ಯೂಜೆ ಒತ್ತಾಯದಿಂದ ಸರ್ಕಾರ 56ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ವಾರ್ತಾ ಇಲಾಖೆ ಏಜೆನ್ಸಿಗಳಿಗೆ ಹಣ ನೀಡಿದೆ. ಆದರೂ, ಇನ್ನೂ ಕೂಡ ಕೆಲ ಏಜೆನ್ಸಿಗಳು ಪತ್ರಿಕೆಗಳಿಗೆ ಹಣ ನೀಡಿಲ್ಲ. ಜಿಲ್ಲೆಗಳಿಂದ ದೂರುಗಳು ಬರುತ್ತಿವೆ. ಏಜೆನ್ಸಿಗಳ ಮೊಂಡುತನಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದಾಗ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

Strict-action-against-agencies-money-advertise-newspapers-Dr.Harsha

 

ವಾರ್ತಾ ಇಲಾಖೆ  ಪತ್ರಕರ್ತರಿಗಾಗಿಯೇ ಇರುವ ಇಲಾಖೆ. ಪತ್ರಕರ್ತರ ಮತ್ತು ಸರ್ಕಾರದ ಕೊಂಡಿಯಾಗಿ ಇಲಾಖೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜಾಹೀರಾತು ಏಜೆನ್ಸಿಗಳು ವಾರ್ತಾ ಇಲಾಖೆಯಲ್ಲಿ ಆಡಳಿತ ನಡೆಸಲು ಬಿಡಬಾರದೆಂದು ಅಧ್ಯಕ್ಷರು ಆಗ್ರಹಿಸಿದರು.

ಈಗಾಗಲೇ ಚಾಟಿ ಬೀಸಿದ್ದು, ಅದರ ಪರಿಣಾಮ ಸಾಕಷ್ಟು ಕೆಲಸವಾಗುತ್ತಿವೆ. ಪತ್ರಿಕೆಗಳಿಂದ ನನಗೆ ಬಂದ ದೂರುಗಳನ್ನು ಆಧರಿಸಿ ಕೆಲವು ಏಜೆನ್ಸಿಗಳಿಗೆ ಸೋಕಾಸ್ ನೋಟೀಸ್ ನೀಡಿದ್ದೇನೆ. ಸರಿಪಡಿಸದಿದ್ದರೆ.ಕಠಿಣ ಕ್ರಮ ತೆಗೆದುಕೊಳ್ಳತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾನು ಇಲಾಖೆಗೆ ವರ್ಗಾವಣೆಯಾಗಿ ಬಂದ ಮೇಲೆ ಸಾಕಷ್ಟು ಬದಲಾವಣೆ ತಂದಿದ್ದೇನೆ. ಪತ್ರಕರ್ತರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಚರ್ಚಿಸಿದ್ದೇನೆ.

ಈ ಸಂದರ್ಭದಲ್ಲಿ ಪತ್ರಕರ್ತ ಚೆಲುವರಾಜು, ಸೋಮಶೇಖರ್ ಕೆರಗೋಡು ಇದ್ದರು.

key words : Strict-action-against-agencies-money-advertise-newspapers-Dr.Harsha