ಸುದೀಪ್ ಜೊತೆ ಕೋಟಿಗೊಬ್ಬ 4 ಕೂಡ ಮಾಡ್ತೇನೆ ಎಂದ ನಿರ್ಮಾಪಕ

ನವದೆಹಲಿ, ಮಾರ್ಚ್ 13, 2020 (www.justkannada.in): ನಿರ್ಮಾಪಕ ಸೂರಪ್ಪ ಬಾಬು ಕೋಟಿಗೊಬ್ಬ 3 ಮಾತ್ರವಲ್ಲ, ಕೋಟಿಗೊಬ್ಬ ಪಾರ್ಟ್ 4 ಕೂಡಾ ಮಾಡ್ತೇವೆ ಎಂದು ಹೇಳಿದ್ದಾರೆ.

ನನ್ನ ಮತ್ತು ಸುದೀಪ್ ನಡುವೆ ಟೀಸರ್ ವಿವಾದದಿಂದಾಗಿ ಯಾವುದೇ ವೈಮನಸ್ಸು ಉಂಟಾಗಿಲ್ಲ. ಕೋಟಿಗೊಬ್ಬ 4 ಕೂಡಾ ಮಾಡ್ತೇವೆ. ಈಗಾಗಲೇ ಕತೆ ರೆಡಿಯಾಗಿದೆ ಎಂದಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟೀಸರ್ ಯೂ ಟ್ಯೂಬ್ ನಿಂದ ಡಿಲೀಟ್ ಆದ ಬೆನ್ನಲ್ಲೇ ಇದರ ಸಲುವಾಗಿ ನೂರಾರು ಊಹಾಪೋಹಗಳು ಹಬ್ಬುತ್ತಿವೆ.