ಪಿಂಪ್ ಗಳಿಂದ ಹಣ ಮಾಡಿಕೊಳ್ಳುವ ಸ್ಥಿತಿ ಬಂದರೇ ಆತ್ಮಹತ್ಯೆ ಎಂದ ಗೃಹಸಚಿವರಿಗೆ ಹೆಚ್.ಡಿಕೆ ತಿರುಗೇಟು.

ರಾಮನಗರ,ಜನವರಿ,14,2023(www.justkannada.in): ಪಿಂಪ್ ಗಳಿಂದ ಹಣ ಮಾಡಿಕೊಳ್ಳುವ ಸ್ಥಿತಿ ಬಂದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಗೃಹಸಚಿವ ಅರಗ ಜ್ಞಾನೇಂದ್ರ ಅವರಿಗೆ ಮಾಜಿ  ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಮನಗರದ ಕೇತಗಾನಹಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ನಾನೇಕೆ ಅವರು ಅತ್ಮಹತ್ಯೆ ಮಾಡಿಕೊಳ್ಳಲಿ ಎಂದು ಹೇಳಲಿ.  ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದು ಕೊಳ್ಳಬೇಕು. ಪೊಲೀಸ್ ಅಧಿಕಾರಿಗಳಿಂದ  ಸ್ಯಾಂಟ್ರೋ ರವಿ ಹಣ ವಸೂಲಿ ಮಾಡಿದ್ದಾನೆ. 150 ಪೊಲೀಸ್ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾನೆ. ಅರಗ ಜ್ಞಾನೇಂದ್ರ ಚೇಂಬರ್ ನಲ್ಲೇ ಎರಡು ಫೋಟೊಗಳಿವೆ.  ಆರಗ ಜ್ಞಾನೇಂದ್ರ ಯಾಕೆ ಇಂತಹ ವ್ಯಕ್ತಿಯನ್ನ ಸೇರಿಸಿಕೊಂಡರು.  ತಮ್ಮ ಭೇಟಿಗೆ ಸಾವಿರಾರು ಜನ ಬರುತ್ತಾರೆ ಎಂದಿದ್ದಾರೆ. ನಾನು ಒಪ್ಪಿಕೊಳ್ಳುತ್ತೇನೆ. ನಮ್ಮನ್ನು ನೋಡಲು ಸಹ ಜನರು ಬರುತ್ತಾರೆ. ಆತ ಏನು ನಡೆಸಿಕೊಂಡು ಬಂದಿದ್ದಾನೆ ಇವರಿಗೆ ಗೊತ್ತಿಲ್ವಾ…? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನಾನು ಕಾಂಗ್ರೆಸ್ ನವರ ಘೋಷಣೆ ಬಗ್ಗೆ ಮಾತನಾಡಲ್ಲ. ದುಡುಯುವವರ ಕೈ ಬಲಪಡಿಸಲು ಕೆಲಸ ಮಾಡಬೇಕು. ಚುನಾವಣೆ ಬರತ್ತಿದ್ದಂತೆ ಸೀರೆ, ಕುಕ್ಕರ್ ಹಂಚುತ್ತಾರೆ. ನಾನು ಕೈಗೊಂಡಿರುವ ಕಾರ್ಯಕ್ರಮ 5 ವರ್ಷ ಪ್ರಗತಿಯಲ್ಲಿವೆ.  ನಾನು ಕೈಗೊಂಡಿರುವ ಕಾರ್ಯಕ್ರಮಕ್ಕೆ 2.5 ಲಕ್ಷ ಕೋಟಿ ರೂ ಬೇಕು. ರೈತರ ಆತ್ಮಹತ್ಯೆ ನೋಡಿ ಸಾಲ ಮನ್ನಾ ಮಾಡಿದ್ದೆ ಎಂದರು.

Key words: HD kumaraswamy- Home Minister –Araga jnanendra