ಚಿತ್ರದುರ್ಗದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ: ಆಡಿಯೋ ಕುರಿತು ಲೋಕಾಯುಕ್ತ ತನಿಖೆಗೆ ರಘು ಆಚಾರ್ ಆಗ್ರಹ.

ಚಿತ್ರದುರ್ಗ,ಜನವರಿ,16,2023(www.justkannada.in):  ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ದ ಗುತ್ತಿಗೆದಾರ ಸಂಘದ ಮಂಜುನಾಥ್ ಭ್ರಷ್ಟಾಚಾರ, ಕಮಿಷನ್  ಆರೋಪ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್, ಚಿತ್ರದುರ್ಗದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.  ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ರಘು ಆಚಾರ್, ಕಮಿಷನ್ ಕೇಳಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಆಡಿಯೋ ಬಿಡುಗಡೆ ಮಾಡಿದ್ದಾರೆ. ಬಿಹೆಪಿ ಶಾಸಕ ತಿಪ್ಪಾರೆಡ್ಡಿ ಅವರ ಆಡಿಯೋ ಬಿಡಗಡೆ ಮಾಡಿದ್ದಾರೆ. ಆಡಿಯೋ ಕುರಿತು ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕು.

ನಮ್ಮ ಬಳಿಯೂ ಅಕ್ರಮದ ಕೆಲ ದಾಖಲೆಗಳಿವೆ. ಶೀಘ್ರದಲ್ಲೇ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇವೆ. ಭ್ರಷ್ಟಾಚಾರ ಬಹಿರಂಗಪಡಿಸಿದ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ರಘು ಆಚಾರ್ ಮನವಿ ಮಾಡಿದರು.

Key words: Corruption – Chitradurga-Raghu Achar -demands -Lokayukta -probe – audio.