ಆಸಿಸ್, ಆರ್’ಸಿಬಿ ಬೌಲರ್ ಕೇನ್ ರಿಚರ್ಡ್​ಸನ್​ಗೆ ಕರೊನಾ ಸೊಂಕು ?

0
249

ನವದೆಹಲಿ, ಮಾರ್ಚ್ 13, 2020 (www.justkannada.in): ಆಸ್ಟ್ರೇಲಿಯಾ ತಂಡ ಮತ್ತು ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಕೇನ್ ರಿಚರ್ಡ್​ಸನ್​ಗೆ ಕರೊನಾ ವೈರಸ್ ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

14 ದಿನಗಳ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತವರಿಗೆ ವಾಪಸಾದ ರಿಚರ್ಡ್​ಸನ್, ಗಂಟಲು ಕೆರತ ಅಂತ ಆಸಿಸ್ ಮೆಡಿಕಲ್ ಸ್ಟಾಫ್​ಗೆ ಕಂಪ್ಲೆಂಟ್ ಮಾಡಿದ್ದಾರೆ. ಸದ್ಯ ವೇಗಿ ರಿಚರ್ಡ್​ಸನ್​ರನ್ನ ತಂಡದ ಆಟಗಾರರಿಂದ ದೂರ ಇರಿಸಿ, ಚಿಕಿತ್ಸೆಗೆ ನೀಡಲಾಗುತ್ತಿದೆ.

ವರದಿಗಾಗಿ ಕಾಯುತ್ತಿರುವ ಆಸಿಸ್ ಮೆಡಿಕಲ್ ಸ್ಟಾಫ್, ರಿಪೋರ್ಟ್​ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಒಂದು ವೇಳೆ ರಿಚರ್ಡ್​ಸನ್​​ಗೆ ಕೊರೊನಾ ಸೊಂಕು ಪಾಸಿಟಿವ್ ಬಂದ್ರೆ, ನ್ಯೂಜಿಲೆಂಡ್ ಸರಣಿ ಮತ್ತು ಐಪಿಎಲ್​ನಿಂದ ದೂರ ಉಳಿಯಲಿದ್ದಾರೆ.