UNIVERSITY OF MYSORE : ಮಾ.22ರಂದು 102ನೇ ಘಟಿಕೋತ್ಸವ

university-of-mysore-convocation

 

ಮೈಸೂರು, ಮಾ.13, 2022 : (www.justkannada.in news ) ಮಾ.22ರಂದು ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ ನಡೆಯಲಿದೆ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಕ್ರಾಫರ್ಡ್‌ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ ಒಟ್ಟು 28581 ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 18567 (ಶೇ. 64.96) ಮಹಿಳಾ ಅಭ್ಯರ್ಥಿಗಳು ಇರುವುದು ವಿಶೇಷ.

10014 (ಶೇ.35.03) ಪುರುಷ ವಿದ್ಯಾರ್ಥಿಗಳಿದ್ದಾರೆ. ವಿವಿಧ ವಿಷಯಗಳಲ್ಲಿ 157 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗುವುದು. ಒಟ್ಟು 376 ಪದಕಗಳು, 214 ನಗದು ಬಹುಮನಗಳನ್ನು 213 ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. 5,677 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 22,747 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ನ್ಯಾಕ್ ಕಮಿಟಿಯ ಪ್ರೊ.ಎಸ್.ಸಿ.ಶರ್ಮ ಆಶಯ ಭಾಷಣ ಮಾಡಲಿದ್ದಾರೆ.

ಬಿಎ ನಲ್ಲಿ ತೇಜಸ್ವಿನಿ ವಿ. 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಎಂಎ ಕನ್ನಡ ವಿಷಯದಲ್ಲಿ ಮಹದೇವಸ್ವಾಮಿಗೆ 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಲಭಿಸಿದೆ. ಅಮೃತ ಎಸ್.ಆರ್. ಅವರಿಗೆ ಬಿಕಾಂನಲ್ಲಿ 3 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಬಂದಿದೆ. ಸುಮನಾ ಕೆ ಎಂಕಾಂನಲ್ಲಿ 4 ಚಿನ್ನದ ಪದಕ ಹಾಗೂ 3 ಕ್ಯಾಶ್ ಪ್ರೈಜ್ ಸಿಕ್ಕಿದೆ. ಕಾವ್ಯಶ್ರೀ ಬಿಇಡಿನಲ್ಲಿ 2 ಮೆಡಲ್, 2 ಕ್ಯಾಶ್ ಪ್ರೈಜ್ ಪಡೆದುಕೊಂಡಿದ್ದಾರೆ. ಧನ್‌ರಾಜ್ ಎಂಎಡ್‌ನಲ್ಲಿ 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಸಿಕ್ಕಿದೆ ಎಂದರು.

ಕುಲಪತಿಗಳ ಸಮ್ಮೇಳನ:

ಮಾ.23, 24, 25ರಂದು ಅಂದರೆ ಮೂರು ದಿನ ಮೈಸೂರಿನಲ್ಲಿ ಆಲ್ ಇಂಡಿಯಾ ವೈಸ್ ಚಾನ್ಸಲರ್ ಕಾನ್ಫರೆನ್ಸ್ ನಡೆಯಲಿದೆ. ದೇಶಾದ್ಯಂತ 150 ಕುಲಪತಿಗಳು ಆಫ್ ಲೈನ್ ಹಾಗೂ 200 ಮಂದಿ ಆನ್‌ಲೈನ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಮೈವಿವಿ ಕುಲಪತಿಗಳ ವಿಶೇಷಾಧಿಕಾರಿ ಡಾ.ಚೇತನ್ ಕುಮಾರ್ ಇದ್ದರು.

key words : university-of-mysore-convocation