ಸಚಿವ ಶ್ರೀರಾಮುಲು ವಿರುದ್ಧ ಕೇಸ್ ದಾಖಲಿಸಲು ಡಿ.ಕೆ ಶಿವಕುಮಾರ್ ಆಗ್ರಹ…

ಬೆಂಗಳೂರು,ಏಪ್ರಿಲ್,23,2021(www.justkannada.in ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಸಚಿವ ಶ್ರೀರಾಮುಲು ವಿರುದ್ಧ ಪ್ರಕರಣ ದಾಖಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.jk

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಸಚಿವ ಶ್ರೀರಾಮುಲು ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವರು ಜಿಲ್ಲೆಗೆ ತೆರಳುವಂತೆ ಸಿಎಂ ಸೂಚಿಸಿದ್ದಾರೆ. ಆದರೆ ಸಚಿವ ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದಾರೆ. ಶ್ರೀರಾಮುಲು ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಧಿಕಾರಿಗಳಿಗೆ ನಿರ್ದೇಶನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸಚಿವರು ಗುಂಪು ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ.  ರಾಜ್ಯದಲ್ಲಿ ಅಕ್ಸಿಜನ್, ರೆಮ್ಡಿಸಿವಿರ್ ಕೊರತೆ ಇದೆ. ಕೋವಿಡ್ ವ್ಯಾಕ್ಸಿನ್ ಸಹ ಸರಿಯಾಗಿಸಿಗುತ್ತಿಲ್ಲ ಎಂದು ಕಿಡಿಕಾರಿದರು.kpcc-president-dk-shivakumar-demands-file-case-against-minister-sriramulu

ಹಾಗೆಯೇ ಪ್ರಧಾನಿ ಮೋದಿ ಸಂವಾದ ಕುರಿತು ಟೀಕಿಸಿದ ಡಿ.ಕೆ ಶಿವಕುಮಾರ್, ಮೋದಿ ಪ್ರವಚನವನ್ನ ಇಲ್ಲಿ ಯಾರು ಕೇಳುವುದಿಲ್ಲ ಎಂದು ಲೇವಡಿ ಮಾಡಿದರು.

Key words: KPCC president- DK Shivakumar -demands – file – case -against -Minister -Sriramulu