ಟಿಪ್ಪು ಜಯಂತಿ ಆಚರಣೆ: ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಪೊಲೀಸ್ ಭದ್ರತೆ.

ಮೈಸೂರು,ನವೆಂಬರ್,10 2022(www.justkannada.in);  ಇಂದು ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಹುಬ್ಬಳ್ಳಿಯ ಈದ್ಗಾ ಮೈದಾನ ಮತ್ತು ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ  ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಹಲವು ಷರತ್ತುಗಳನ್ನ ವಿಧಿಸಿ ಅನುಮತಿ ನೀಡಿದೆ.  20 ಅಡಿ ಉದ್ದ 30 ಅಡಿ ಅಗಲ  ಪೆಂಡಾಲ್ ಹಾಕಲು ಅವಕಾಶ.  ಟಿಪ್ಪು ಫೋಟೋ  ಬಿಟ್ಟು  ಬೇರೆ ಯಾರ ಫೋಟೊ ಹಾಕುವಂತಿಲ್ಲ. ಬೇರೆ ಯಾವುದೇ ಭಾವಚಿತ್ರ ಭಾವುಟ ಪ್ರದರ್ಶಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಮೈಸೂರಿನಲ್ಲೂ ಭಾರಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.  ಎನ್. ಆರ್ ಮೊಹಲ್ಲಾದ ಮಸೀದಿ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ.  ಎನ್ ಆರ್ ಮೊಹಲ್ಲಾದ ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.  ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್  ಮಾಡಲಾಗಿದೆ.

Key words:  Tipu Jayanti –celebrations-Police security – Hubballi- Mysore.