ರಾಬರ್ಟ್’ಗೆ ಜೊತೆಗಾತಿ ಸಿಕ್ಕಳು ! ಆಶಾ ಭಟ್ ಚಾನ್ಸ್ ನೀಡಿದ ತರುಣ್ ಸುಧೀರ್

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ ‘ರಾಬರ್ಟ್’ ಗೆ ನಾಯಕಿ ಸಿಕ್ಕಿದ್ದಾರೆ.

ಈ ಬಾರಿ ದಚ್ಚುಗೆ ಜೋಡಿಯಾಗುತ್ತಿರುವುದು ಕನ್ನಡತಿ ಆಶಾ ಭಟ್‌. ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಯರ ಹೆಸರು ‘ರಾಬರ್ಟ್’ ಸಿನಿಮಾಗೆ ಕೇಳಿ ಬಂದಿತ್ತು.

ಇದೀಗ ಆ ಜಾಗಕ್ಕೆ ಈಗ ಭದ್ರಾವತಿಯ ಬೆಡಗಿ ಆಶಾ ಭಟ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆಶಾ ಮಿಸ್ ಸುಪ್ರ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.