ಇಂದು ಬಿಸಿಸಿಐ ಮಹತ್ವದ ಸಭೆ: ಐಪಿಎಲ್ ಭವಿಷ್ಯ ನಿರ್ಧಾರ

ಮುಂಬೈ, ಜುಲೈ 17, 2020 (www.justkannnada.in): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಹತ್ವದ ಸಭೆ ಇಂದು ನಡೆಯಲಿದೆ.

ಈ ಸಭೆಯಲ್ಲಿ ಐಪಿಎಲ್ 13 ಆಯೋಜನೆ ಬಗ್ಗೆ ತೀರ್ಮಾನವಾಗಲಿದೆ. ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ರದ್ದುಗೊಳಿಸುವ ಸಾಧ್ಯತೆ ಇದೆ. ಆ ಸಮಯದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.

ಒಂದು ವೇಳೆ ಭಾರತದಲ್ಲಿ ಸಾಧ್ಯವಾಗದೇ ಹೋದರೆ ವಿದೇಶೀ ತಾಣದಲ್ಲಾದರೂ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ನಡೆಸಿದೆ. ಈ ಬಗ್ಗೆ ಇಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ.