ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಕೊಲೆ ಬೆದರಿಕೆ: ಸೋಷಿಯಲ್ ಮೀಡಿಯಾದಲ್ಲಿ ನೆರವು ಕೋರಿದ ನಟಿ

ಬೆಂಗಳೂರು, ಜುಲೈ 17, 2020 (www.justkannnada.in): ನಟಿ ರಿಯಾ ಚಕ್ರವರ್ತಿಗೆ ಇನ್ಸ್ಟಾಗ್ರಾಮ್ ನಲ್ಲಿ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.

ಈ ಬಗ್ಗೆ ರಿಯಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸೈಬರ್ ಕ್ರೈಮ್ ನ ಸಹಾಯ ಕೋರಿದ್ದಾರೆ. ಸುಶಾಂತ್ ಸಿಂಗ್ ಅವರ ನಿಧನದ ನಂತರ ಅವರ ಗೆಳತಿ ರಿಯಾ ಚಕ್ರವರ್ತಿ ಮೇಲೆ ಬಹಳಷ್ಟು ಅಪವಾದಗಳು ಕೇಳಿ ಬಂದಿದ್ದವು.

ಸುಶಾಂತ್ ಅನುಭವಿಸುತ್ತಿದ್ದ ಮಾನಸಿಕ ಖಿನ್ನತೆ ಬಗ್ಗೆ, ಸುಶಾಂತ್ ಗೆ ಆಗುತ್ತಿದ್ದ ತೊಂದರೆಗಳ ಬಗ್ಗೆ ಗೊತ್ತಿದ್ದರೂ ಆಕೆ ಮೌನವಾಗಿದ್ದರು ಎಂಬ ಕಾರಣಕ್ಕೆ ರಿಯಾ ಚಕ್ರವರ್ತಿ ಬಗ್ಗೆ ನೆಟ್ಟಿಗರು ಸಿಟ್ಟಾಗಿದ್ದರು. ಇದೀಗ ಈ ವಿಷಯ ತಾರಕಕ್ಕೆ ಏರಿ, ರಿಯಾ ಚಕ್ರವರ್ತಿ ಅವರಿಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಸಹ ಬಂದಿದೆ.