ಅಮೆಜಾನ್ ಪ್ರೈಮ್’ನಲ್ಲಿಂದು ಪಿಆರ್’ಕೆ ಪ್ರೊಡಕ್ಷನ್’ ಸಸ್ಪೆನ್ಸ್ ಥ್ರಿಲ್ಲರ್ ‘ಲಾ’ ರಿಲೀಸ್

ಬೆಂಗಳೂರು, ಜುಲೈ 17, 2020 (www.justkannnada.in): ಬಹುದಿನಗಳ ಬಳಿಕ ಕನ್ನಡ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.

ಹೌದು. ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಾಣವಾದ ‘ಲಾ’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಅಮೆಝೋನ್ ಪ್ರೈಮ್ ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಅವರು ನಾಯಕಿಯಾಗಿ ನಟಿಸಿದ ಚೊಚ್ಚಲ ಸಿನಿಮಾ ಇದಾಗಿದೆ. ಅವರ ಜತೆಗೆ ಅವಿನಾಶ್, ಅಚ್ಯುತ್ ರಾವ್ ಇತರರು ನಟಿಸಿದ್ದಾರೆ. ಕೊರೋನಾ, ಲಾಕ್ ಡೌನ್ ಗೌಜಿ ಗದ್ದಲಗಳ ನಡುವೆ ಸ್ಯಾಂಡಲ್ ವುಡ್ ಸಿನಿಮಾ ರಿಲೀಸ್  ಆಗಿ ನಾಲ್ಕು ತಿಂಗಳು ಕಳೆದಿದೆ.