ಇನ್ಸ್ಟಾಗ್ರಾಂ ಫಾಲೋವರ್ಸ್: ದಾಖಲೆ ಬರೆದ ‘ಕಿಂಗ್ ಕೊಯ್ಲಿ’

ಬೆಂಗಳೂರು, ಜುಲೈ 17, 2020 (www.justkannnada.in): ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಫೇಸ್​ಬುಕ್​, ಟ್ವಿಟರ್​ಗಿಂತ ಇನ್ಸ್​ಟಾಗ್ರಾಮ್​ನಲ್ಲಿ ಅತಿಹೆಚ್ಚು ಫಾಲೋವರ್ಸ್​ನ ಕೊಹ್ಲಿ ಹೊಂದಿದ್ದಾರೆ. ಸದ್ಯ ವಿರಾಟ್​ ಕೊಹ್ಲಿ ಅವರನ್ನ ಇನ್ಸ್​ಟಾಗ್ರಾಮ್​ನಲ್ಲಿ 68.5 ಮಿಲಿಯನ್​ ಜನ ಫಾಲೋ ಮಾಡ್ತಿದ್ದಾರೆ.

ಈ ಮೂಲಕ ಕೊಹ್ಲಿ, ವಿಶ್ವದಲ್ಲಿ ಅತಿಹೆಚ್ಚು ಇನ್ಸ್​ಟಾಗ್ರಾಮ್​ ಫಾಲೋವರ್ಸ್ ಹೊಂದಿರೋ ನಾಲ್ಕನೇ ಅಥ್ಲೀಟ್ ಎನಿಸಿದ್ದಾರೆ. ಅಮೆರಿಕಾದ ಬಾಸ್ಕೆಟ್​ ಬಾಲ್​ ಆಟಗಾರ ಲೆಬ್ರನ್​ ಜೇಮ್ಸ್​ರನ್ನ ಕೊಹ್ಲಿ ಹಿಂದಿಕ್ಕಿದ್ದಾರೆ.

ಮೊದಲ ಸ್ಥಾನದಲ್ಲಿ ಪೋರ್ಚುಗಲ್​ನ ಕ್ರಿಸ್ಟಿಯಾನೋ ರೊನಾಲ್ಡೋ, ಎರಡನೇ ಸ್ಥಾನದಲ್ಲಿ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ, ಮೂರರಲ್ಲಿ ಬ್ರೆಜಿಲ್​ನ ​ ನೇಯ್ಮರ್ ಇದ್ದಾರೆ. ​