Wednesday, July 29, 2026

BDA Apartments

Home Front Page ಮೈಸೂರು ಜಿಲ್ಲೆ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ರಾಜೀನಾಮೆ…..

ಮೈಸೂರು ಜಿಲ್ಲೆ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ರಾಜೀನಾಮೆ…..

ಮೈಸೂರು,ಜು,17,2020(www.justkannada.in): ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಅವರು ರಾಜೀನಾಮೆ ನೀಡಿದ್ದಾರೆ.mahendra-resigns-mysore-district-rural-bjp-president

ಕೆಲ ತಿಂಗಳ ಹಿಂದೆ ಮಹೇಂದ್ರ ಅವರು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿಗೆ ಅಧ್ಯಕ್ಷರಾಗಿದ್ದರು. ಇದೀಗ ಸ್ವ ಇಚ್ಚೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ರಾಜ್ಯಾಧ್ಯಕ್ಷರಿಗೆ ಮಹೇಂದ್ರ ಪತ್ರ ಬರೆದಿದ್ದಾರೆ. ಮೈಸೂರು ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಿಂದ ಸ್ಥಳೀಯ ಬಿಜೆಪಿ ನಾಯಕರ ತಲೆದಂಡವಾಗಿತ್ತು ಎನ್ನಲಾಗಿದ್ದು, ಚುನಾವಣೆ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂದು ಮಹದೇವ್ ನಂದೀಶ್ ಅವರನ್ನ ಜಿಲ್ಲಾಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಗಿತ್ತು.mahendra-resigns-mysore-district-rural-bjp-president

ಈಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಳೊಪ್ಪಂದದಿಂದ ಚುನಾವಣೆ ನಡೆದಿದೆ ಎಂದು ಪರಾಜಿತ ಜಿಡಿಎಸ್ ಬೆಂಬಲಿತ ಅಭ್ಯರ್ಥಿ ಕೋಟೆಹುಂಡಿ ಮಹದೇವು ಹೇಳಿದ್ದರು.

ನಾಮ ನಿರ್ದೆಶಿತ ಬಿಜೆಪಿ  ಸದಸ್ಯರಿಗೆ ಹಣದ ಆಮಿಷವನ್ನ ಬಿಜೆಪಿ ನಾಯಕರೇ ನೀಡಿದ್ದಾರೆಂದು ಪರಾಜಿತ ಅಭ್ಯರ್ಥಿ ಕೋಟೆಹುಂಡಿ ಮಹದೇವು ಆರೋಪಿಸಿದ್ದರು. ಹೀಗಾಗಿ ನಂತರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನ ವಜಾ ಮಾಡಲಾಗಿತ್ತು. ಈ  ಬೆನ್ನಲ್ಲೆ ಈಗ ಜಿಲ್ಲಾಧ್ಯಕ್ಷ  ಮಹೇಂಧ್ರ ಅವರು ರಾಜೀನಾಮೆ ನೀಡಿದ್ದಾರೆ.

Key words: Mahendra- resigns – Mysore district –rural- BJP president