Monday, September 14, 2026

BDA Apartments

ಗೃಹಜ್ಯೋತಿ ಮಾಹಿತಿ ಸಂಗ್ರಹಣೆ ಕುರಿತು ವದಂತಿ: ಚಾವಿಸನಿನಿ(CESC) ಸ್ಪಷ್ಟನೆ BDA JK_Adv...
Home Front Page ಗೃಹಜ್ಯೋತಿ ಮಾಹಿತಿ ಸಂಗ್ರಹಣೆ ಕುರಿತು ವದಂತಿ: ಚಾವಿಸನಿನಿ(CESC) ಸ್ಪಷ್ಟನೆ

ಗೃಹಜ್ಯೋತಿ ಮಾಹಿತಿ ಸಂಗ್ರಹಣೆ ಕುರಿತು ವದಂತಿ: ಚಾವಿಸನಿನಿ(CESC) ಸ್ಪಷ್ಟನೆ

ಮೈಸೂರು, ಜುಲೈ, 29, 2026 (www.justkannada.in): ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚಾವಿಸನಿನಿ) ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹ ಕಾರ್ಯ ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ.

ಈ ನಡುವೆ, ಫಲಾನುಭವಿಗಳ ಮಾಹಿತಿ ಸಂಗ್ರಹಣೆಗೆ ಜುಲೈ 31,2026 ಕೊನೆಯ ದಿನ ಎಂಬ ಬಗ್ಗೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ವದಂತಿ ಗ್ರಾಹಕರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದೆ. ಈ ಕುರಿತು ಚಾವಿಸನಿನಿ ಸ್ಪಷ್ಟನೆ ನೀಡಿದ್ದು, ಮಾಹಿತಿ ಸಂಗ್ರಹಣೆ ಹಾಗೂ ಅಗತ್ಯ ವಿವರಗಳನ್ನು ಸಲ್ಲಿಸಲು ಆಗಸ್ಟ್‌ 31, 2026ರವರೆಗೂ ಅವಕಾಶವಿದೆ.ಗೃಹಜ್ಯೋತಿ ಮಾಹಿತಿ ಸಂಗ್ರಹಣೆ ಕುರಿತು ವದಂತಿ grihajyothi

ಆದ್ದರಿಂದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಹಾಗೂ ವಿದ್ಯುತ್ ಗ್ರಾಹಕರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗದೆ, ನಿಗದಿತ ಅವಧಿಯೊಳಗೆ ತಮ್ಮ ಮಾಹಿತಿಯನ್ನು ಸಲ್ಲಿಸಬಹುದು ಮತ್ತು ಇದಕ್ಕಾಗಿ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ಚಾವಿಸನಿನಿ ತಿಳಿಸಿದೆ.ಚಾವಿಸನಿನಿ(CESC) ಸ್ಪಷ್ಟನೆ jk02_new jk02 new

ಚಾವಿಸನಿನಿಯ ಮೀಟರ್‌ ರೀಡರ್‌ ಅಥವಾ ನಿಯೋಜಿತ ಸಿಬ್ಬಂದಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗೆ ಮಾಹಿತಿ ಸಂಗ್ರಹಣೆಗೆ ಭೇಟಿ ನೀಡಲಿದ್ದು, ಗ್ರಾಹಕರು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಚಾವಿಸನಿನಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೃಹಜ್ಯೋತಿ ಮಾಹಿತಿ ಸಂಗ್ರಹಣೆಗೆ ನೀಡಬೇಕಾದ ದಾಖಲಾತಿಗಳ ವಿವರ:

  1. ಆಧಾರ್ ಕಾರ್ಡ್
  2. ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  3. ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
  4. ಪ್ಯಾನ್ ಕಾರ್ಡ್ (ಅನ್ವಯಿಸುವಲ್ಲಿ ಮಾತ್ರ)
  5. ಚಾಲ್ತಿಯಲ್ಲಿರುವ ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ)
  6. ರೇಷನ್ ಕಾರ್ಡ್(ಅನ್ವಯಿಸುವಲ್ಲಿ ಮಾತ್ರ)

Key words: Rumors, Grihajyoti, data collection, CESC,  clarifies