ನಾನು ಜೆಡಿಎಸ್ ಗೆ ವಾಪಸ್ ಬರಲ್ಲ: ನನ್ನ ಫೇಸ್ ಮಾಡೋ ಧೈರ್ಯ ಹೆಚ್.ಡಿಕೆ ಮಾಡಲ್ಲ-  ಎಸ್.ಆರ್ ಶ್ರೀನಿವಾಸ್.

ತುಮಕೂರು,ನವೆಂಬರ್,10,2022(www.justkannada.in):  ನಾನು ಜೆಡಿಎಸ್ ಗೆ ವಾಪಸ್ ಬರಲ್ಲ. ನನ್ನ ಫೇಸ್ ಮಾಡೋ ಧೈರ್ಯವನ್ನ ಹೆಚ್.ಡಿಕೆ ಮಾಡಲ್ಲ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಆರ್ ಶ್ರೀನಿವಾಸ್,  ಜೆಡಿಎಸ್ ಗೆ ವಾಪಸ್ ಬರಲು ನಾನೇನು ಜಿಟಿಡಿ, ಶೀವರಾಮೇಗೌಡ ಅಲ್ಲ.  ನಾನು ನಮ್ಮ ಅಪ್ಪನ ಮಾತೇ ಕೇಳಲ್ಲ. ನನಗೇನು ಬೇಕೋ  ಅದನ್ನೇ ಮಾಡುತ್ತೇನೆ ಆನೇಕ ಶಾಸಕರಿಗೆಲ್ಲ ನಾನು ಜೆಡಿಎಸ್ ನಲ್ಲಿರಬೇಕೆಂಬುದು ಇದೆ.  ಆದರ ನಮ್ಮ ನಾಯಕರಿಗೆ  ನಾನು ಬೇಕಾಗಿಲ್ಲ ಎಂದರು.

ನಾನು ಕ್ಷಣಕ್ಕೊಂದು ಮಾತನಾಡುವ ವ್ಯಕ್ತಿಯಲ್ಲ ನನ್ನದೇ ಆದ ವ್ಯಕ್ತಿತ್ವ ಇದೆ.  ಹೆಚ.ಡಿಕೆ  ನನ್ನ ಬಳಿ ಬರಲ್ಲ  ನನ್ನನ್ನ ಫೇಸ್ ಮಾಡೋ ಧೈರ್ಯ ಹೆಚ್.ಡಿ ಕೆ ಮಾಡಲ್ಲ ಎಂದು ಎಸ್.ಆರ್ ಶ್ರೀನಿವಾಸ್ ತಿಳಿಸಿದರು.

Key words: I will not -come back – JDS-gubbi-MLA-SR Srinivas.