ಮಳೆಗೆ ಮನೆ ಗೋಡೆ ಕುಸಿದು ಮೂವರು ಸಾವು.

Promotion

ರಾಯಚೂರು,ಅಕ್ಟೋಬರ್,3,2022(www.justkannada.in):  ಮಳೆಗೆ ಮನೆ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪರಮೇಶ್(45), ಜಯಮ್ಮ(39) ಹಾಗೂ ಭರತ್ (5) ಮೃತರು.

ಮಗು ಸೇರಿದಂತೆ ಪತಿ ಹಾಗೂ ಪತ್ನಿ ರಾತ್ರಿ ಊಟ ಮಾಡಿ ಮಲಗಿದ್ದರು. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಬೆಳಗಿನ ಜಾವ ಕುಸಿದು ಬಿದ್ದಿದೆ. ಸ್ಥಳಕ್ಕೆ ಮಾನ್ವಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: Three people -died – house –wall- collapsed-raichur