ಬುದ್ಧಿ ಹೇಳಲು ಹೋದ ‘ಕೈ’ ಮುಖಂಡನಿಗೆ ಚಾಕು ಇರಿತ.

ಹುಬ್ಬಳ್ಳಿ ಅಕ್ಟೋಬರ್,3,2022(www.justkannada.in): ಬುದ್ಧಿ ಹೇಳಲು ಹೋದ ಕಾಂಗ್ರೆಸ್ ಮುಖಂಡನಿಗೆ ದುಷ್ಕರ್ಮಿಗಳು ಚಾಕಿ ಇರಿದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ನಡೆದಿದೆ. ತೌಸೀಫ್ ಚಾಕು ಇರಿತಕ್ಕೊಳಗಾದ ಕಾಂಗ್ರೆಸ್ ಮುಖಂಡ. ಇಸ್ಮಾಯಿಲ್ ಎಂಬಾತನೇ ಚಾಕು ಇರಿದ ಆರೋಪಿ.  ಇಸ್ಮಾಯಿಲ್ ಮತ್ತು ಗುಂಪು ಜಗಳ ತೆಗೆದು  ಕಾಂಗ್ರೆಸ್ ಮುಖಂಡ ತೌಸೀಫ್ ಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ.

ಇಸ್ಮಾಯಿಲ್ ನನ್ನ ಬೆಂಡಿಗೇರಿ ಠಾಣಾ ಪೊಲೀಸರು ಬಂಧಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

Key words: congress -leader – stabbed – knife-hubli