ಕೊಚ್ಚುವೆಲಿ -ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆ: ಸಿಎಂ ಬಿಎಸ್ ಯಡಿಯೂರಪ್ಪರಿಂದ ಚಾಲನೆ..

ಮೈಸೂರು,ಸೆ,29,2019(www.justkannada.in): ಕೊಚ್ಚುವೇಲಿ- ಬೆಂಗಳೂರು ಡೈಲಿ ಎಕ್ಸ್ ಪ್ರೆಸ್  ಸಾಂಸ್ಕೃತಿಕ ನಗರಿ ಮೈಸೂರಿಗೆ ವಿಸ್ತರಣೆ ಮಾಡಲಾಗಿದೆ.

ಮೈಸೂರು ರೈಲ್ವೆ ‌ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಸಿಎಂ ಯಡಿಯೂರಪ್ಪ  ಚಾಲನೆ ನೀಡಿದರು.  ಕೊಚ್ಚುವೇಲಿ -ಬೆಂಗಳೂರು ಡೈಲಿ ಎಕ್ಸ್ ಪ್ರೆಸ್  ರೈಲು ಪ್ರತಿದಿನ ಸಂಜೆ 4:45ಕ್ಕೆ ಕೊಚ್ಚುವೇಲಿಯಿಂದ ಹೊರಟು ಬೆಂಗಳೂರಿಗೆ 8 ಗಂಟೆಗೆ ಬರಲಿದೆ. ನಂತರ ಅದು ಪ್ರತಿದಿನ ಬೆಳಿಗ್ಗೆ 11:20ಕ್ಕೆ ಮೈಸೂರಿಗೆ ತಲುಪಲಿದೆ. ಮತ್ತೆ ಮಧ್ಯಾಹ್ನ 12:50ಕ್ಕೆ ಮೈಸೂರಿನಿಂದ‌ ಹೊರಟು ಮಧ್ಯಹ್ನ 4:35ಕ್ಕೆ ಬೆಂಗಳೂರು ತಲುಪಲಿದೆ.

ಬಳಿಕ ಬೆಂಗಳೂರಿ‌ನಿಂದ ಸಂಜೆ 4:50ಕ್ಕೆ ಹೊರಡುವ ರೈಲುಗಾಡಿ ರಾತ್ರಿ 9:35 ಕ್ಕೆ ಕೊಚ್ಚುವೇಲಿಗೆ ತಲುಪಲಿದೆ. ಈ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡುವ ಜತೆಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕಲ್ಪಿಸಿರುವ ಹೆಚ್ಚುವರಿ  ಸೌಲಭ್ಯಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಲೋಕಾರ್ಪಣೆ‌ ಮಾಡಿದರು.  ಕಾರ್ಯಕ್ರಮದಲ್ಲಿ  ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಸಚಿವರಾದ ಸೋಮಣ್ಣ, ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್ ಮುಂತಾದವರು ಭಾಗಿಯಾಗಿದ್ದರು.

Key words: Kochuveli-Bangalore- Daily Express- Expansion – Mysore –cm bs yeddyurappa