ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದ ವಿ. ಶ್ರಿನಿವಾಸ್ ಪ್ರಸಾದ್ ಗೈರು…..

ಮೈಸೂರು,ಸೆ,29.2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗೈರಾಗಿದ್ದರು.

ಇಂದು ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಚಾಲನೆ ನೀಡಿದರು. ಈ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವ ವಿ,ಸೋಮಣ್ಣ , ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸಚಿವ ಸಿ.ಟಿ ರವಿ, ಎಸ್.ಎ ರಾಮದಾಸ್, ಮಾಜಿ ಸಚಿವ ಜಿ.ಟಿ ದೇವೇಗೌಡರು ಸೇರಿ  ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಆದರೆ ಕಾರ್ಯಕ್ರಮದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗೈರಾಗಿದ್ದರು. ರಾಜ್ಯದಲ್ಲಿ ನೆರೆ  ಉಂಟಾಗಿದ್ದು ಇಲ್ಲಿ ಆಡಂಬರದ ದಸರಾ ಬೇಕಿತ್ತೆ ಎಂದ  ಸಂಸದ ವಿ. ಶ್ರಿನಿವಾಸ್ ಪ್ರಸಾದ್ ಪ್ರಶ್ನಿಸಿದ್ದರು. ನೆರೆ ಹಾವಳಿಯಿಂದ ಜನ ಸಂಕಷ್ಟದಲ್ಲಿರುವಾದ ಅದ್ದೂರಿ ದಸರಾ ಬೇಡ ಎಂದು ಆಕ್ಷೇಪಿಸಿದ್ದರು. ಈ ಹಿನ್ನೆಲೆ  ಇಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಪ್ರಸಾದ್ ಅಳಿಯ ಶಾಸಕ  ಹರ್ಷವರ್ಧನ್ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೆಯೇ ನೆನ್ನೆ  ಮೈಸೂರಿಗೆ ಸಿಎಂ ಆಗಮಿಸಿದ್ದರೂ ಸಂಸದ ಶ್ರೀನಿವಾಸ್ ಪ್ರಸಾದ್  ಆಗಮಿಸಿರಲಿಲ್ಲ.

Key words: MP –Shrinivas Prasad- absent-mysore dasara-inaugural