ಆರೋಗ್ಯಕ್ಕೆ ಪೂರಕವಾದ ಕೃತಿಗಳು ಪ್ರತಿ ಮನೆಗಳಿಗೂ ತಲುಪಬೇಕು : ಅಡ್ಡಂಡ ಕಾರ್ಯಪ್ಪ

ಮೈಸೂರು,ಡಿಸೆಂಬರ್,20,2020(www.justkannada.in) : ಆರೋಗ್ಯಕ್ಕೆ ಪೂರಕವಾದ ಸಲಹೆಗಳನ್ನು ನೀಡುವ ಕೃತಿಗಳು ಪ್ರತಿ ಮನೆಗಳಿಗೂ ತಲುಪವಂತಾಗಬೇಕು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.Teachers,solve,problems,Government,bound,Minister,R.Ashokಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಯಮ್ಮ ಪ್ರಕಾಶನ, ಆರೋಗ್ಯ ಯೋಗ ಸಂಸ್ಥೆ ಹಾಗೂ ಸುಯೋಗ್ ಆಸ್ಪತ್ರೆ ಸಹಯೋಗದಲ್ಲಿ ರಾಮಕೃಷ್ಣನಗರದ ಸುಯೋಗ ಆಸ್ಪತ್ರೆ ಆವರಣದಲ್ಲಿ ಡಾ.ಎಸ್.ಪಿ‌.ಯೋಗಣ್ಣ ಅವರ ‘ಹೃದಯಾಘಾತ’ ಮೂರನೇ ಆವೃತ್ತಿಯನ್ನು ಬಿಡುಗೊಳಿಸಿ ಅವರು ಮಾತನಾಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಯೋಗಣ್ಣ ಅಂತಹವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿದೆ‌. ೫ ಸಾವಿರ ಮಂದಿಗೆ ೫೦ ಸಾವಿರ ಅರ್ಜಿಗಳು ಬರುತ್ತವೆ. ಆದರೆ, ಇಂತಹವರನ್ನು ಗುರುತಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಬೇಕು ಎಂದರು.

ಮೈಸೂರು ವಿವಿ ಕುಲಪತಿ ಡಾ.ವಿದ್ಯಾಶಂಕರ್ ಮಾತನಾಡಿ, ಆರೋಗ್ಯದ ವಿಚಾರಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕನ್ನಡದಲ್ಲಿ ಮಾಹಿತಿ ಸಿಗುವಂತಹ ಪುಸ್ತಕಗಳನ್ನು ಹೊರತರುತ್ತಿರುವುದು ಸ್ವಾಗತಾರ್ಹ. ಹೆಚ್ಚು ಹೆಚ್ಚು ಮಂದಿ ಇದನ್ನು ಅರಿತುಕೊಳ್ಳಬೇಕಿದೆ. ಆರೋಗ್ಯ ಕಿಲಿ ಕೈ ಆಗುವ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಹೃದ್ರೋಗ ತಜ್ಞ ಡಾ.ಅರುಣ್ ಶ್ರೀನಿವಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಜಯದೇವ ಹೃದ್ರೋಗ ಸಂಸ್ಥೆ ಮುಖ್ಯಸ್ಥ ಡಾ.ಎಂ.ಸದಾನಂದ್, ಹೃದ್ರೋಗ ತಜ್ಞರಾದ ಡಾ.ವಿನು, ಡಾ.ಆದಿತ್ಯ ಉಡುಪ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

key words : Supplement-health-works-every-household-Reach-addanda karyappa