ಸ್ಪೀಕರ್ ಕಾಲಮಿತಿಯೊಳಗೆ ಒಂದು ನಿರ್ಧಾರಕ್ಕೆ ಬರ್ತಾರೆ ಎಂಬ ವಿಶ್ವಾಸವಿದೆ- ಜಗದೀಶ್ ಶೆಟ್ಟರ್…

ಬೆಂಗಳೂರು,ಜು,17,2019(www.justkannada.in): ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನ ಸ್ವಾಗತಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸ್ಪೀಕರ್ ಕಾಲಮಿತಿಯೊಳಗೆ ಒಂದು ನಿರ್ಧಾರಕ್ಕೆ ಬರ್ತಾರೆ ಅಂತ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸುಪ್ರೀಂ ತೀರ್ಪಿನ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ಸುಪ್ರೀಂ ಕೋರ್ಟ್ ಆದೇಶವನ್ನು ‌ಪಕ್ಷ ಸ್ವಾಗತಿಸುತ್ತದೆ. ಸುಪ್ರೀಂ ತೀರ್ಪು ಸೂಕ್ತವಾದದ್ದು. ಸುಪ್ರೀಂ ತೀರ್ಪನ್ನ ಸ್ವಾಗತ ಮಾಡ್ತೇವೆ. ಸುಪ್ರೀಂ ಕೋರ್ಟ್ ಆದೇಶದಂತೆ ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕರಿಸಬೇಕು.  ಸ್ಪೀಕರ್ ಕಾಲಮಿತಿಯೊಳಗೆ ಒಂದು ನಿರ್ಧಾರಕ್ಕೆ ಬರ್ತಾರೆ ಅಂತ ವಿಶ್ವಾಸವಿದೆ ಎಂದರು.

15ಕ್ಕೂ ಹೆಚ್ಚು ಶಾಸಕರು ಸರ್ಕಾರಕ್ಕೆ ಬೆಂಬಲವಿಲ್ಲ ಎಂದಿದ್ದಾರೆ., ಶಾಸಕರು ರಾಜೀನಾಮೆ ನೀಡಿದಾಗಲೇ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕಿತ್ತು ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದರು.

Key words: confident -speaker – decision –time-  Jagadish Shetter.