Sunday, August 23, 2026

BDA Apartments

Home Cinema ನಾಲ್ಕು ಭಾಷೆಗಳಲ್ಲಿ ಪೈಲ್ವಾನ್ ಗೆ  ಧ್ವನಿ ನೀಡ್ತಿದ್ದಾರೆ ಕಿಚ್ಚ ಸುದೀಪ್

ನಾಲ್ಕು ಭಾಷೆಗಳಲ್ಲಿ ಪೈಲ್ವಾನ್ ಗೆ  ಧ್ವನಿ ನೀಡ್ತಿದ್ದಾರೆ ಕಿಚ್ಚ ಸುದೀಪ್

ಬೆಂಗಳೂರು,ಜುಲೈ,17:  ನಟ ಕಿಚ್ಚಾ ಸುದೀಪ್  ಅವರ ಮುಂದಿನ ಚಿತ್ರ ಪೈಲ್ವಾನ್ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ನಡುವೆ  ನಾಲ್ಕು ಭಾಷೆಗಳಿಗೆ ಸ್ವತಃ ಕಿಚ್ಚ ಸುದೀಪ್ ಅವರೇ ಧ್ವನಿ ನೀಡಿದ್ದಾರೆ.

ನಾಲ್ಕು ಭಾಷೆಗಳಲ್ಲಿ ಪೈಲ್ವಾನ್ ಗೆ ಸುದೀಪ್ ಡಬ್ ಮಾಡಿದ್ದಾರೆ. ಆದರೆ ಮಲಯಾಳಂ ನಲ್ಲಿ ಮಾತ್ರ ಸುದೀಪ್ ಧ್ವನಿ ಕೇಳುವುದಿಲ್ಲ. ಹೌದು, ಸುದೀಪ್ ಗೆ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಹೀಗಾಗಿ ಸುದೀಪ್ ಮಲಯಾಳಂ ನಲ್ಲಿ ಡಬ್ ಮಾಡಲು ಯತ್ನಿಸಿಲ್ಲ.

ಉಳಿದಂತೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರವೇ ಸುದೀಪ್ ಪೈಲ್ವಾನ್ ಗೆ ಧ್ವನಿ ನೀಡಿದ್ದಾರೆ.