ಮಾಜಿ ಸಚಿವ ರೋಶನ್ ಬೇಗ್ ನಿವಾಸದ ಬಳಿ ವಿದ್ಯುನ್ಮಾನ ಪತ್ರಕರ್ತರ ಬೀದಿ ಜಗಳ…

 

ಬೆಂಗಳೂರು, ಮೇ.21, 2019 : (www.justkannada.in news ) : ಸಮಾಜದ ಸ್ವಾಸ್ಥ ಕಾಯಬೇಕಾದ ಮಾಧ್ಯಮ ಪ್ರತಿನಿಧಿಗಳೇ ಸಾರ್ವಜನಿಕರ ಎದುರೇ ಬಹಿರಂಗವಾಗಿ ಜಗಳವಾಡಿಕೊಂಡ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.

ಇಲ್ಲಿನ ಫ್ರೇಜರ್ ಟೌನ್ ನಲ್ಲಿರುವ ಮಾಜಿ ಸಚಿವ ರೋಶನ್ ಬೇಗ್ ನಿವಾಸದ ಸಮೀಪ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳ ಪರಸ್ಪರರ ಜಗಳ ಬಿಡಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯ್ತು. ಸುಮಾರು 60 ನಿಮಿಷಗಳಿಗೂ ಹೆಚ್ಚು ಕಾಲ ನಡೆದ ಈ ರಂಪಾಟ ರಸ್ತೆಯಲ್ಲಿನ ದಾರಿ ಹೋಕರಿಗೆ ಉಚಿತ ಮನರಂಜನೆ ನೀಡಿತು.

ಮಾಜಿ ಸಚಿವ ರೋಶನ್ ಬೇಗ್, ಪತ್ರಕರ್ತರ ಗಲಾಟೆಯಿಂದ ರೋಸಿ ಹೋಗಿ ‘ ಯೂ ಆರ್ ಆಲ್ ಅನ್ ಫಿಟ್ ಟು ಬಿ ಎ ಜರ್ನಲಿಸ್ಟ್ …’ ಎಂದು ಬೈದುಕೊಂಡು ಮನೆಯಿಂದ ಹೊರಗಡೆ ನಿರ್ಗಮಿಸಿದರು ಎನ್ನಲಾಗಿದೆ.

ಏನಿದು ಘಟನೆ :

ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರೋಶನ್ ಬೇಗ್ ಮಂಗಳವಾರ ಫ್ರೇಜರ್ ಟೌನ್ ನ ನಿವಾಸದಲ್ಲಿ ಮಾಧ್ಯಮಗೋಷ್ಠಿ ಕರೆದಿದ್ದರು. ಈ ಗೋಷ್ಠಿಗೆ ಕನ್ನಡ ಹಾಗೂ ಇಂಗ್ಲಿಷ್ ಚಾನಲ್ ನ ವರದಿಗಾರರು ಸೇರಿದಂತೆ ಅನೇಕ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದರು. ಪತ್ರಿಕಾಗೋಷ್ಠಿ ಬಳಿಕ ಕನ್ನಡ ಚಾನಲ್ ನ ಕೆಲವರು ರೋಶನ್ ಬೇಗ್ ಜತೆ ಚಿಟ್ ಚಾಟ್ ನಡೆಸಲು ಮುಂದಾದರು.
ಮೊದಲಿಗೆ ದಿಗ್ವಿಜಯ ವಾಹಿನಿ ವರದಿಗಾರ, ಬಳಿಕ ಪಬ್ಲಿಕ್ ಟಿವಿಯ ವರದಿಗಾರ ಚಿಟ್ ಚಾಟ್ ನಡೆಸಿದರು. ಇದಾದ ಬಳಿಕ ಬಿ-ಟಿವಿ ಪ್ರತಿನಿಧಿ , ಬೇಗ್ ಜತೆ ಚಿಟ್ ಚಾಟ್ ನಡೆಸುತ್ತಿರುವಾಗ ಸ್ಥಳದಲ್ಲಿದ್ದ ನ್ಯಾಷನಲ್ ಚಾನಲ್ ನ ಪ್ರತಿನಿಧಿ, ಬೇಗ..ಬೇಗ ಚಿಟ್ ಚಾಟ್ ಮುಗಿಸಿ ಎಂದು ಆತುರ ಪಡಿಸಿದ್ದು ಪರಿಸ್ಥಿತಿ ಬಿಗಡಾಯಿಸಿ ತಳ್ಳಾಟ, ನೂಕಾಟಕ್ಕೂ ಕಾರಣವಾಯ್ತು ಎನ್ನಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ಇತರೆ ಹಿರಿಯ ಪತ್ರಕರ್ತರು ಗಲಾಟೆ ನಿಯಂತ್ರಿಸಿ, ಸಮಾಧಾನಗೊಳಿಸಲು ಯತ್ನಿಸಿದರಾದರು ಪ್ರಯೋಜನಕ್ಕೆ ಬಾರಲಿಲ್ಲ ಎನ್ನಲಾಗಿದೆ.

ಇದಿಷ್ಟು ಬೆಳವಣಿಗೆಗಳನ್ನು ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು ಅದು ಇದೀಗ ವೈರಲ್ ಆಗಿದೆ. ಆ ಮೂಲಕವೇ ಜರ್ನಲಿಸ್ಟ್ ಗಳ ಜಗಳ ಸಾಮಾಜಿಕ ಜಾಲತಾಣದಲ್ಲಿ  ಬಹಿರಂಗಗೊಳ್ಳಲು ಕಾರಣವಾಗಿದೆ.

ಪ್ರತಿಕ್ರಿಯೆ :

ಸುದ್ದಿ ನೀಡುವ ಧಾವಂತದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ಸಹಜ. ಇದು ಆ ಕ್ಷಣದ ಪ್ರತಿಕ್ರಿಯೆಗಳಷ್ಟೇ. ಯಾವುದೂ ಉದ್ದೇಶಪೂರ್ವಕವಲ್ಲ. ಹೀಗಾಗಿ ಇದು ಮಹತ್ವ ನೀಡುವ ವಿಚಾರವಲ್ಲ ಎಂದು ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಕಿರಣ್ ಜಸ್ಟ್ ಕನ್ನಡ ಡಾಟ್ ಇನ್ ಗೆ ಪ್ರತಿಕ್ರಿಯಿಸಿದ್ದಾರೆ.


shame for journalist community; electronic media jourlists quarraled over chit chat issue.

Today after pressmeet by senior congress leader R Roshan baig, regional and English electronic media jourlists quarraled over chit chat issue. During verbal attack some one manhandled also. One hour and twenty minutes street fight wittened peoples laughing. Finally Roshan baig left house saying you are unfit to be journalists .