Saturday, September 19, 2026

BDA Apartments

ಆನೆ ದಾಳಿ: ಕರ್ತವ್ಯನಿರತ ಅರಣ್ಯ ರಕ್ಷಕ ಸಾವು BDA JK_Adv BDA Adv
Home Crime ಆನೆ ದಾಳಿ: ಕರ್ತವ್ಯನಿರತ ಅರಣ್ಯ ರಕ್ಷಕ ಸಾವು..

ಆನೆ ದಾಳಿ: ಕರ್ತವ್ಯನಿರತ ಅರಣ್ಯ ರಕ್ಷಕ ಸಾವು..

 

ಚಾಮರಾಜನಗರ, ಮೇ 21, 2019 : (www.justkannada.in news ) ಕರ್ತವ್ಯ ನಿರತ ಅರಣ್ಯ ರಕ್ಷಕನೋರ್ವ ಆನೆ ತುಳಿದು ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತದಲ್ಲಿ ನಡೆದಿದೆ‌.

ಹಲಗ (೩೮) ಮೃತ ದುರ್ದೈವಿ. ಪಾಲಾರ್ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಲಗ ನಾಗಮಲೆಗೆ ತೆರಳುವ ದಾರಿಯಲ್ಲಿ ಆನೆ ದಾಳಿಗೊಳಗಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ‌.

ಮೃತ ಹಲಗನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು ಎಂದು ಮೂಲಗಳು ತಿಳಿಸಿದ್ದು, ಮಲೆಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹ ಇರಿಸಲಾಗಿದೆ.

elephant attack, forest gard killed near mahadeshwara hill, kollegala