ಮಹಿಳಾ ಭಕ್ತೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ: ಶನಿದೇವರ ಗುಡ್ಡಪ್ಪ ಆತ್ಮಹತ್ಯೆಗೆ ಯತ್ನ..

ಮೈಸೂರು,ಮೇ,22,2019(www.justkannada.in): ಮಹಿಳಾ ಭಕ್ತೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದ ಹಿನ್ನೆಲೆ ಇದರಿಂದ ಮನನೊಂದ ಶನಿದೇವರ ಗುಡ್ಡಪ್ಪ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮೈಸೂರು ತಾಲೂಕು ಮಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶನಿದೇವರ ಗುಡ್ಡಪ್ಪ ಬಸವರಾಜ ನಾಯಕ್ ಮೈಮೇಲೆ ದೇವರು ಬರುತ್ತದೆ ಎಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದ.ಅಲ್ಲದೆ ಗೃಹಿಣಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಈತನ ಮೇಲೆ ಕೇಳಿ ಬಂದಿತ್ತು. ಮಕ್ಕಳಾಗದ ಗೃಹಿಣಿಯನ್ನ ತನ್ನ ಜೊತೆ ಬರುವಂತೆ ಕರೆದಿದ್ದ  ಎನ್ನಲಾಗಿತ್ತು.

ಈ ನಡುವೆ ಗ್ರಾಮಸ್ಥರು ಆತನನ್ನ ಪೂಜೆ ನೆಪದಲ್ಲಿ ಗ್ರಾಮಕ್ಕೆ ಕರೆಸಿ ಕೂಡಿಹಾಕಿದ್ದರು. ಪೊಲೀಸರ ಆಗಮನದಿಂದ ಆತ ಬಚಾವ್ ಆಗಿದ್ದ . ಈ ಘಟನೆಯಿಂದ  ನೊಂದಿದ್ದ  ಗುಡ್ಡಪ್ಪ ಬಸವರಾಜ ನಾಯಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗುಡ್ಡಪ್ಪನನ್ನ ಇದೀಗ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Key words: misbehaving with a woman devotee: guddappa try to attempts suicide.

#mysore #crimenews #attempts #suicide.