ಕಾಂಗ್ರೆಸ್ ಹಿರೋ ಇಲ್ಲದ ಪಾರ್ಟಿ: ಈ ಇಬ್ಬರು ನಾಯಕರನ್ನ ವಿಲನ್ ಗೆ ಹೋಲಿಸಿದ ಆರ್ ಅಶೋಕ್..

ಬೆಂಗಳೂರು,ಮೇ,21,2019(www.justkannada.in): ಕಾಂಗ್ರೆಸ್‌ ಹಿರೋ ಇಲ್ಲದ ಪಾರ್ಟಿ, ಅಲ್ಲಿ ಬರೀ ವಿಲನ್‌ಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಮುಖ್ಯ ಖಳನಾಯಕ, ದಿನೇಶ್‌ ಗುಂಡೂರಾವ್‌ ಸಹ ಖಳ ನಾಯಕ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಆರ್. ಅಶೋಕ್, ರೋಷನ್‌ ಬೇಗ್‌ ರದ್ದು ಟೀಸರ್‌ , ಸಿನಿಮಾ 23 ಕ್ಕೆ; ಆರ್‌.ಅಶೋಕ್‌ ಲೇವಡಿ ಕಾಂಗ್ರೆಸ್‌ನ ಹಿರಿಯ ನಾಯಕರ ರೋಷನ್‌ ಬೇಗ್‌ ಅವರು ಇಂದು ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಸಿನಿಮಾ ಮೇ 23 ಕ್ಕೆ ಬಿಡುಗಡೆ ಆಗಲಿದೆ ಎಂದು ವ್ಯಂಗ್ಯವಾಡಿದರು.

ರೋಷನ್ ಬೇಗ್ ಬಿಡುಗಡೆ ಮಾಡಿರುವುದು ಟೀಸರ್‌. ಕಾಂಗ್ರೆಸ್‌ ಹಿರೋ ಇಲ್ಲದ ಪಾರ್ಟಿ, ಅಲ್ಲಿ ಬರೀ ವಿಲನ್‌ಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಮುಖ್ಯ ಖಳನಾಯಕ, ದಿನೇಶ್‌ ಗುಂಡೂರಾವ್‌ ಸಹ ಖಳ ನಾಯಕ, ಇನ್‌ ಚಾರ್ಜ್‌ ಕೆ.ಸಿ ವೇಣುಗೋಪಾಲ್‌ ಕಾಮೆಡಿಯನ್‌  ಎಂದು ಟೀಕಿಸಿದರು.

Key words: Party without Congress Hero-R Ashok

#Politicalnews #rashok